ಅಧರ್ಮದ ಅವನತಿಗೆ,ಧರ್ಮದರಕ್ಷಣೆಗೆ ಧರೆಗಿಳಿದವನೇ ಶ್ರೀ ಕೃಷ್ಣ
ಸಂಜೆವಾಣಿ ವಾರ್ತೆ
ಜಗಳೂರು.ಆ.೨೭:- ಸಮಾಜದಲ್ಲಿ ಅಧರ್ಮ ತಾಂಡವಾಡು ತ್ತಿರುವಾಗ ಧರ್ಮರಕ್ಷಣೆಗೆ ಧರೆಗಿಳಿದು ಬರುವವನೇ ಅವತಾರ ಪುರುಷ ಶ್ರೀಕೃಷ್ಣ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿ ದ್ದ ಶ್ರೀಕೃಷ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ತ್ರೇತಾ,ದ್ವಾಪರ,ಕಲಿಯುಗಾಂತರಗಳಲ್ಲಿ ಸನಾತನ ಧರ್ಮ ದಲ್ಲಿ,ಯುಗಪುರುಷ,ದಾರ್ಶನಿಕ,ಸಾಧುಸಂತ,ಶರಣರು ಜನ್ಮತಾಳಿದ ಇತಿಹಾಸ ಹೊಂದಿದ ಗತವೈಭದ ದೇಶ ಭಾರತ’ಎಂದು ವ್ಯಾಖ್ಯಾನಿಸಿದರು‌.ಮಹಭಾರತದ ಶ್ರೀ ಕೃಷ್ಣನು ಕೇವಲ‌ಯಾದವ ಸಮಾಜಕ್ಕೆ ಸೀಮಿತವಾಗದೆ ಎಲ್ಲಾವರ್ಗದವರು ಮಹಾಭಾರತ ಗ್ರಂಥವನ್ನು ಅಧ್ಯಯನ ನಡೆಸಬೇಕಿದೆ.ಇದರಿಂದ ಗೀತಾಸಾರ,ಶ್ರೀಕೃಷ್ಣನ ಸಂದೇಶಗಳನ್ನು ಯುವಪೀಳಿಗೆಗೆ ಪಸರಿಸಬೇಕಿದೆ.ತಾಲೂಕಿನಲ್ಲಿ ಯಾದವ ಸಮಾಜ ದವರು ಒಗ್ಗೂಡಿ ಪಕ್ಷಾತೀತ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ ಅನ್ಯ ಸಮಾಜಕ್ಕೆ ಮಾದರಿಯಾಗಬೇಕು.ಯಾದವ ಸಮಾಜದ ಶ್ರೇಯೋಭಿವೃದ್ದಿಗೆ ಸದಾ ಬದ್ದನಾಗಿರುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು .ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನಪರ ಆಡಳಿತ ನಡೆಸುತ್ತಿದ್ದು.ಹಿಂದುಳಿದ,ಶೋಷಿತ ಸಮುದಾಯಗಳು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕಿದೆ’ ಎಂದು ಕಿವಿಮಾತು ಹೇಳಿದರು.