ಜಲಸಂಗಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಹುಮನಾಬಾದ್ :ಆ.26: ತಾಲೂಕಿನ ಜಲಸಂಗಿ ಗ್ರಾಮದ ಕನಕ ಶಿಶು ವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ನಿಮಿತ್ತ ಶಾಲೆಯ ವೇದಿಕೆ ಮೇಲೆ ನವಿಲು ಗರಿ ಇದ್ದ ಕಿರೀಟ ತೊಟ್ಟ ಕೃಷ್ಣ ವೇಷಧಾರಿಗಳು ಕೈಯಲ್ಲಿ ಕೊಳಲು ಹಿಡಿದುಕೊಂದು ಸಂತಸ ಪಟ್ಟರು. ಇನ್ನುಳಿದ ಚಿಣ್ಣರು ಧರಿಸಿದ್ದ ಕೃಷ್ಣ, ರಾಧೆ, ರುಕ್ಮಿಣಿಯರ ವೇಷ ನೋಡುಗರ ಕಣ್ಮನ ಸೇಳೆಯಿತು.
ಶಾಲೆಯಲ್ಲಿ ಕೃಷ್ಣ ಭಗವಾನರ ವಿಗ್ರಹಕ್ಕೆ ಶ್ರದ್ಧೆ, ಭಕ್ತಿಯಿಂದ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ಕೃಷ್ಣ-ರಾಧೆ ವೇಷಧಾರಿಗಳಿಂದ ಮೊಸರು ಗಡಿಗೆ ಒಡೆಯಲಾಯಿತು. ಬಳಿಕ ಮಕ್ಕಳಿಗೆ ಸಿಹಿ ಹಂಚಲಾಯಿತು. ಕೃಷ್ಣ- ರಾಧೆ ವೇಷಧಾರಿ ಮಕ್ಕಳು ಪ್ರದರ್ಶಿಸಿದ ನೃತ್ಯಕ್ಕೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭೀಮಶಾ ಮೇತ್ರೆ, ಮಂಜುರ ಅಲಿ, ಸಂಗೀತಾ ವರವಟ್ಟಿ (ಕೆ), ರಾಜಕುಮಾರ ರಡ್ಡಿ, ಭೀಮ ರೆಡ್ಡಿ, ಅಂಬಿಕಾ ಆರ್. ಪೂಜಾರಿ, ಭಾವನ ದುಬಲಗುಂಡಿ, ಅಂಬಿಕಾ ಹೊನ್ನಗೊಂಡ, ಸುಜಾತಾ ವಳಖಿಂಡಿ, ಜಗದೇವಿ ರಾಮರೆನೋರ್ ಇದ್ದರು.