ಸರ್ಕಾರದಿಂದ ಸಿಗುವ ಅನುದಾನದಲ್ಲಿ ಶ್ರೀಕೃಷ್ಣ ಭವನ,ಕಟ್ಟಡ, ನಿಗಮಗಳು ಕಲ್ಪಿಸುವ ಪ್ರಯತ್ನ ಮಾಡಲಾಗುವುದು:ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ
ಕಲಬುರಗಿ:ಆ.26: ಸರ್ಕಾರದಿಂದ ಸಿಗಬೇಕಾದ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಜನಾಂಗದವರಿಗೆ ಸಿಗುವ ಸËಲಭ್ಯಗಳನ್ನು ಶ್ರೀಕೃಷ್ಣ ಭವನ, ಕಟ್ಟಡ, ನಿಗಮಗಳಾಗಲಿ ಮುಂದಿನ ದಿನಗಳಲ್ಲಿ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಹೇಳಿದರು.
ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಯತ್, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಕೃಷ್ಣ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಟಾರ್ಚನೆ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಪಾಟಿಸಿ ಮಾತನಾಡುತ್ತಾ, ರಾಜ್ಯ ಸರ್ಕಾರವು ಐದು ಸಾವಿರ ಕೋಟಿ ಅನುದಾನ ಕೆ. ಕೆ. ಆರ್. ಡಿ. ಬಿ. ಗೆÉ ಕೊಟ್ಟಿದ್ದಾರೆ. ನಾನು ನಮ್ಮ ಶಾಸಕರಾದ ಅಲ್ಲಮ ಪ್ರಭು ಪಾಟಿಲ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಜಯಸಿಂಗ್ ಹಾಗೂ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಮಾತನಾಡಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಹೇಳಿದರು.
ಶ್ರೀ ಕೃಷ್ಣನ ಜಯಂತಿಯನ್ನು ನಾವೆಲ್ಲರೂ ಸೇರಿಕೊಂಡ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಅಧರ್ಮವನ್ನು ನಾಶಪಡಿಸಿಲು ಧರ್ಮವನ್ನು ಸ್ಥಾಪಿಸಲು, ಭೂಮಿಯ ಮೇಲೆ ಅನ್ಯಾಯ, ಅತ್ಯಾಚಾರ, ರಕ್ಷಸರನ್ನು ಸಾರ್ವನಾಶ ಮಾಡಲು ನಾನು ಜನ್ಮತಾಳುತ್ತೇನೆ ಎಂದು ಹೇಳಲಾಗಿದೆ ಎಂದರು.
ಶ್ರೀ ಕೃಷ್ಣನ್ನು ಯಾದವ ಕುಟುಂಬದಲ್ಲಿ ಜನಿಸಿದ್ದು ಹೆಮ್ಮೆಯ ವಿಷಯವಾಗಿದೆ ಮತ್ತು ಮಹಾಭಾರತದಲ್ಲಿ ತನ್ನ ಉಪದೇಶ ಮಾಗದರ್ಶನದ ಮೂಲಕ ಕೌರವರನ್ನು ಸೋಲಿಸಿ ಪಾಂಡವರನ್ನು ಗೆಲ್ಲುಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಹೇಳಿದರು.
ಮಕ್ಕಳ ನೃತ್ಯವನ್ನು ನೋಡಿ ಸಾಕ್ಷತ: ಶ್ರೀ ಕೃಷ್ಣನ ಹಾಗೆ ನೃತ್ಯವನ್ನು ಮಾಡಿದ ರೀತಿಯಲ್ಲಿ ಮಕ್ಕಳು ಮಾಡಿದರು ಉತ್ತಮ ಸಂಸ್ಕಾರ ಕೊಟ್ಟಿದ್ದಿರಿ ಇದಕ್ಕಾಗಿ ಪಾಲಕ ಪೋಷಕರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಮ್ ಪ್ರಭುಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವಾಗ ಸಮಾಜದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮದ ಹಾದಿಯನ್ನು ತೋರಿಸಲು ಶ್ರಿ ಕೃಷ್ಣ ಪರಮಾತ್ಮ ಮತ್ತೆ ಮತ್ತೆ ಜನ್ಮತಾಳುತ್ತಾನೆ ಎಂದು ಉಲ್ಲೇಖವಿದೆ ಕೃಷ್ಣ ಯಾವ ಯಾವ ಮನೆಯಲ್ಲಿ ಬೆಣ್ಣೆ ತಿನ್ನುವುದಕ್ಕೆ ಹೋಗಿದ್ದಾನು ಆ ಮನೆ ಉದ್ಧಾರವಾಗಿದೆ ಎಂದು ಹೇಳಲಾಗಿದೆ ಎಂದರು.
ಮಾನವ ಸಮಾಜವನ್ನು ಸರಿದಾರಿಗೆ ತರುವಂತಹ ಮಹಾ ಸಂದೇಶಗಳನ್ನು ಭಗವದ್ಗೀತೆಯಲ್ಲಿವೆ ಗುಲ್ಬರ್ಗದಲ್ಲಿ ನಿಮ್ಮ ಸಮಾಜವನ್ನು ಅರ್ಥಿಕವಾಗಿ ಸಮಾಜಕಿವಾಗಿ ಶೈಕ್ಷಣಕವಾಗಿ ಮುಂದೆ ತರಲು ಸಕಲ ಪ್ರಯತ್ನವನ್ನು ಮಾಡುತ್ತೆವೆ ಎಂದು ಹೇಳಿದರು.
ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ನಿ) ಕಲಬುರಗಿ ರಾಮಕೃಷ್ಣ ಯಾದವ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವಿಷ್ಣುವಿನ 8ನೇ ಅವತಾರವೇ ದ್ವಾಪರ್ ಯುಗದಲ್ಲಿ ಜನಿಸಿದ ಭಗವಾನ್ ಶ್ರೀ ಕೃಷ್ಣ, ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಅತ್ಯಂತ ಮಂಗಳಕರವಾದ ಆರೋಹಣದಲ್ಲಿ ಬಾಲ ಕೃಷ್ಣ ಜನಿಸಿದನು.
ಶ್ರೀ ಕೃಷ್ಣನು ಜನಿಸಿದ ಈ ಲಗ್ನದಲ್ಲಿ ಎಲ್ಲ ಶುಭ ಗ್ರಹಗಳು ಆಕಾಶದಲ್ಲಿ ಗೋಚರಿಸಿದವು. ಆ ಸಮಯದಲ್ಲಿ ಶ್ರೀಕೃಷ್ಣನು ಜನಿಸಿದ ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿಗಳ ಸಂಯೋಗದಿಂದ ಜಯಂತಿ ಎಂಬ ಯೋಗವು ರೂಪುಗೊಂಡಿತು. ಜ್ಯೋತಿಷಿಗಳ ಪ್ರಕಾರ ಅಂದು ರಾತ್ರಿ 12 ಗಂಟೆ ಶೂನ್ಯ ವೇಳೆಯಾಗಿತ್ತು, ಶ್ರೀ ಕೃಷ್ಣನಿಗೆ ಸಂಬಂಧಿಸಿದಂತೆ ಅನೇಕ ಕಥೆಗಳಿವೆ ನಾವಿಂದು ತಿಳಿಯೋಣ ಎಂದು ಸಂಕ್ಷಿಪ್ತ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಸೇವೆ ಸಲ್ಲಿಸಿದ ವಯಸ್ಸಾದ ತಾಯಂದಿರಿಗೆ ಹಾಗೂ ಮೆಡಿಕಲ್ ಕಾಲೇಜಿನ್ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಯಾದವ ಸಮಾಜ ರವಿ ಉದನೂರು, ಸಮಾಜ ಹಿರಿಯ ಉಪಾಧ್ಯಕ್ಷರಾದ ಎಸ್.ಎಸ್. ಕುಲಕರ್ಣಿ, ಯುವ ನಾಯಕರಾದ ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಉದ್ದನೂರ, ಸೇರಿದಂತೆ ಸಮಾಜ ಮುಖಂಡರಾದ ಕಲ್ಲಪ್ಪ ಯಾದವ, ಸಂಧ್ಯಾಭಟ್ ತಂಡದಿಂದ ನೃತ್ಯವನ್ನು ಪ್ರದರ್ಶಿಸಲಾಯಿತು. ಸಮಾಜ ಮುಖಂಡರುಗಳು ಹೆಣ್ಣುಮಕ್ಕಳು ಗಂಡು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.