1.814 ಕೆಜಿ ಗಾಂಜಾ ಜಪ್ತಿ
ಕಲಬುರಗಿ,ಆ.26-ಅಬಕಾರಿ ಜಂಟಿ ಆಯುಕ್ತರು ಮತ್ತು ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ದೊಡ್ಡಪ್ಪ ಹೆಬಳೆ ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ನರೇಂದ್ರ, ಅಬಕಾರಿ ಉಪ ನಿರೀಕ್ಷಕರಾದ ರಾಚಮ್ಮ ಹಾಗೂ ಸಿಬ್ಬಂದಿಗಳಾದ ಮೊಹಮ್ಮದ್ ಮುಬಿನ್, ವಸಂತ್ಕುಮಾರ್ ಅವರು ಅಫಜಲಪೂರ ತಾಲ್ಲೂಕಿನ ಕರಜಗಿ ಗ್ರಾಮದ ನೀಲಾಬಾಯಿ ಗಂಡ ಚಂದ್ರಕಾಂತ ವಾಡಿ ಎಂಬುವವರ ಟಿನ್ ಶೆಡ್ ಮನೆ ಮೇಲೆ ದಾಳಿ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಟ್ಟಿದ್ದ ಹೂ, ಬೀಜ ಮತ್ತು ಎಲೆಗಳಿಂದ ಕೂಡಿದ್ದ ಒಟ್ಟು 1.814 ಕೆಜಿ ಒಣ ಗಾಂಜಾವನ್ನು ವಶಪಡಿಸಿಕೊಂಡು, ಆರೋಪಿ ನೀಲಾಬಾಯಿಯನ್ನು ಬಂಧಿಸಿ ಎನ್‍ಡಿಪಿಎಸ್ ಕಾಯ್ದೆ 1985 ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.