ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಬೀದರ್:ಆ.26: ನಗರದ ರಾಂಪೂರೆ ಕಾಲೋನಿಯ ಕಛೇರಿಯಲ್ಲಿ ರವಿವಾರ ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದರ ಅಶೋಕ ಖೇಣಿ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಾಯಿತು ಸಭೆಯಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಕಾರ್ಯಕರ್ತರ ಕುಂದು ಕೊರತೆಗಳ ಸ್ಪಂದಿಸಿದರು.
ಮಾನ್ಯ ಅಶೋಕ ಖೇಣಿ ರವರು ಮಾತಾನಾಡಿ ಲೋಕಸಭಾ ಚುನಾವಣೆ, ಪದವಿಧರರ ವಿಧಾನ ಪರಿಷತ್ ಚುನಾವಣೆ, ಇನ್ನೀತರ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಕಾಂಗ್ರೆಸ್ ಗೆ ಬಂದಿದೆ ಅದರ ಶ್ರೇಯಸ್ಸು ನಿಮಗೆ ಸಲ್ಲುತ್ತದೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಪಕ್ಷದ ಕ್ಷೇತ್ರದವಾಗಿದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಅಂತರ ಮತಗಳಿಂದ ಸೋಲಾಗಿದೆ ಯಾವಬ್ಬ ಕಾರ್ಯಕರ್ತರು ಎದೆಗುಂದ್ದ ಬೇಡಿ ನಿಮ್ಮ ಜೊತೆಯಲ್ಲಿ ನಾನು ಇದ್ದೆನೆ
ಮುಂಬರುವ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುತ್ತೆನೆ ಕಾಂಗ್ರೆಸ್ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಜಯ ಸಾಧಿಸಬೇಕು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ ಕಾರ್ಯಕರ್ತರ ಅತಿ ಉತ್ಸಾಹದಿಂದ ಕೆಲಸ ಮಾಡಬೇಕು ನಿಮ್ಮ ಕುಂದು ಕೊರತೆ ಇದ್ದಲ್ಲಿ ನಮ್ಮ ಕಛೇರಿಗೆ ಸಂಪರ್ಕ ಮಾಡಿ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಚಂದ್ರಶೇಖರ್ ಚನಶಟ್ಟಿ, ಕರೀಮ ಸಾಬ ಕಮಠಾಣ ಸೇರಿ ದಕ್ಷಿಣ ಕ್ಷೇತ್ರದ ಮುಖಂಡರು, ಮೂಂಚೂಣಿ ಘಟಕದ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.