ಕಾರ್ಮಿಕ ಹಿತರಕ್ಷಣಾ ಸಂಘಟನೆ ಸಂಸ್ಥಾಪಣಾ ದಿನಾಚರಣೆ
ಚನ್ನಮ್ಮನ ಕಿತ್ತೂರು,ಆ.26: ಕಾರ್ಖಾನೆ ವಿಷಯದಲ್ಲಿ ಕಾರ್ಮಿಕರು ಮತ್ತು ಆಡಳಿತ ಮಂಡಳಿ ಒಗ್ಗಟಿನಿಂದ ಕಾರ್ಯನಿರ್ವಹಿಸಿದರೆ ಯಾವೊಂದು ಕಾರ್ಯನಿಲ್ಲುವುದಿಲ್ಲ. ಎಂದು ಕೆಪಿಸಿಸಿ ಸದಸ್ಯೆ ರೋಹಿನಿ ಪಾಟೀಲ ಹೇಳಿದರು.
ತಾಲೂಕಿನ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಆವರಣದಲ್ಲಿ ಕಾರ್ಮಿಕ ಹಿತರಕ್ಷಣಾ ಸಂಘಟನೆ 3ನೇ ಸಂಸ್ಥಾಪನಾ ದಿನಾಚರಣೆ ಮತ್ತು ಸತ್ಕಾರ ಸಮಾರಂಭದ ಕಾರ್ಯಕ್ರಮದಲ್ಲಿ ದೀಪಬೆಳಗಿಸಿ, ಸತ್ಕಾರ ಸ್ವೀಕರಿಸಿ ಕಾರ್ಮಿಕರಿಗೆ ಸಿಹಿ ತಿನ್ನಿಸಿ ಅವರು ಮಾತನಾಡಿದ ಕಾರ್ಖಾನೆ ವಿಷಯ ಬಂದಾಗ ಕಾರ್ಮಿಕರೆಲ್ಲರೂ ಒಗ್ಗಟಿನಿಂದ ಇರಬೇಕು. ಮತ್ತು ಸಂಸ್ಥೆಯ ಅಭಿವೃದ್ಧಿ ಕಾರ್ಖಾನೆ ಏಳ್ಗೆಯ ಗುರಿ ಇಟ್ಟುಕೊಂಡು ಕೆಲಸ ಮಾಡಿ ಕಾರ್ಖಾನೆ ಬೆಳೆಸಬೇಕು. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವಿದ್ದು ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಸಕ್ಕರೆ ಸಚಿವ ಮುಖ್ಯಮಂತ್ರಿಯವರಿಂದ ಕಾರ್ಖಾನೆಗೆ ಬೇಕಾಗುವ ಎಲ್ಲ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇನೆ. ರೈತರಿಗೆ ಉತ್ತಮ ಬೆಂಬಲ ಬೆಲೆ ನೀಡೋಣ ಮತ್ತು ರೈತ ಬಾಂದವರು ಬೇರೆ ಕಾರ್ಖಾನೆ ಕಬ್ಬು ಪೂರೈಸದೇ ಇದೇ ಕಾರ್ಖಾನೆಗೆ ಕಬ್ಬು ಪೂರೈಸಿದರೇ ಇನ್ನೂ ಹೆಚ್ಚಿ ಅಭಿವೃದ್ಧಿ ಹೊಂದಲು ಸಾಧ್ಯವೆಂದರು.
ಅತಿಥಿಗಳಾಗಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಕಾರ್ಖಾನೆ ನಿರ್ದೇಶಕ ಸಿದ್ದಪ್ಪ ದೂರಪ್ಪನವರ ಕಳೆದ ಮೂರು ವರ್ಷಗಳಿಂದ ಕಾರ್ಮಿಕ ಹಿತರಕ್ಷಾ ಸಂಘಟಣೆ ದಿನಾಚರಣೆ ಆಚರಿಸುತ್ತಾ ಬಂದಿದ್ದು ಕಾರ್ಖಾನೆ ಅಭಿವೃದ್ದಿಗೊಸ್ಯರ ಕಾರ್ಮಿಕರೆಲ್ಲರೂ ಶ್ರಮವಹಿ ದುಡಿಯುತಿದ್ದ್ತಾರೆ, ಕಾರ್ಖಾನೆ ಏಳ್ಗೆ ಇವರ ಜವಾಬ್ದಾರಿಯಾಗಿದ್ದು. ಇವರ ಜೊತೆಗೆ ಆಡಳಿತ ಮಂಡಳಿ ಕೈಜೋಡಿಸಿದರೆ ಕಾರ್ಖಾನೆ ಇನ್ನೂ ಹೆಚ್ಚಿಗೆ ಅಭಿವೃದ್ಧಿ ಹೊಂದುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಕಾರ್ಖಾನೆ, ನಿಕಟಪೂರ್ವ ಅಧ್ಯಕ್ಷ ಹಾಗೂ ನಿರ್ದೇಶಕ ನಾಶೀರ ಬಾಗವಾನ್ ಮಾತನಾಡಿ . ನಾನು ಅಧ್ಯಕ್ಷನಾದ ಸಂದರ್ಭದಲ್ಲಿ ಕಾರ್ಮಿಕರ ಹಿತ ಕಾಪಾಡುವಲ್ಲಿ ಆಡಳಿತ ಮಂಡಳಿ ಒಗ್ಗೂಡಿಸಿಕೊಂಡು ಕೆಲಸ ಮಾಡಿದ್ದೇನೆ. ರೈತರಿಗೆ, ಕಾರ್ಖಾನೆಗೆ, ಕಾರ್ಮಿಕರಿಗೆ ಯಾವ ಅನ್ಯಾಯ ಮಾಡಿಲ್ಲ ಎಂದರು. Á್ರಸ್ತಾವಿಕವಾಗಿ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ, ನಿದೇರ್ಏಶಕರುಗಳಾದ ಅಶೋಕ ಬೆಂಡಿಗೇರಿ, ಮೀನಾಕ್ಷಿ ನೆಲಗಳಿ, ಕಾರ್ಮಿಕ ಸಂಘಟನೆ ಅಧ್ಯಕ್ಷ ರಾಜೇಂದ್ರ ಶಿರಮೋಜಿ ಮಾತನಾಡಿದರು. ಕಾರ್ಮಿಕ ಸಂಘಟನೆಯವರಿಂದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಖಾನೆ ನಿರ್ದೇಶಕರನ್ನು ಸತ್ಕರಿಸಿ ಗೌರವಿಸಲಾಯಿತು. ಇದೇ ವೇಳೆ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು, 230 ಮುಕ್ತೆ ಕಾರ್ಮಿಕರನ್ನು ಹಂಗಾಮಿ ಕಾರ್ಮಿಕರೆಂದು ನೇಮಕಗೊಳಿಸಿ ಆದೇಶ ಪತ್ರ ನೀಡಲಾಯಿತು. ಕಲ್ಮೇಶ್ವರ ಪ್ರೌಢ ಶಾಲಾ ಮಕ್ಕಳಿಂದ ಸ್ವಾಗತ ಗೀತೆ ಏರ್ಪಪಟ್ಟಿರು.
ಅನುಷ್ಯಾ ಮತ್ತು ತನುಷ್ಯಾ ಶಿರಮೋಜಿ ಯವರಿಂದ ಭರತ ನಾಟ್ಯದೊಣಂದಿಗೆ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ಕಾರ್ಖಾನೆ ಆವರಣದಲ್ಲಿ ವಾದ್ಯಮೇಳ ಮಹಿಳೆಯರಿಂದ ಕುಂಭ ಆರತಿಯೊಂದಿಗೆ ಆಗಮಿಸಿ ಶ್ರೀ ಗಜಾನನ ಮನೂರ್ತಿಗೆ ಅಭಿಷೇಕ ನೇರವೇರಿಸಿ , ಬಂಡೇಮ್ಮ ದೇವಿಗೆ ಉಡಿ ತುಂಬಲಾಯಿತು.
ಈ ವೇಳೆ ನಿರ್ದೇಶಕರುಗಳಾದ ಲಕ್ಷ್ಮಣ ಎಮ್ಮಿ, ಶಂಕರಗೌಡ ಪಾಟೀಲ, ಮಂಜುನಾಥ ಪಟೀಲ, ಬಸವರಾಜ ಪುಂಡಿ, ಜ್ಯೋತಿಬಾ ಹೈಬತ್ತಿ, ಭರತೇಶ ಸೇಭನ್ನವರ, ಬಸವರಾಜ ಬೆಂಡಿಗೇರಿ, ಸಾವಂತ ಕಿರಬನವರ, ಸಂಜು ಹೊಬಳೇಪ್ಪನವರ, ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕ ಸಂಘಟನೆ ಅಧ್ಯಕ್ಷ ಹಾಗೂ ಬೈಲಹೊಂಗಲ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೇರಿದಂತೆ ಕಛೇರಿಯ ಅಧೀಕ್ಷಕ ಶ್ರೀ ಹೆಗಡೆ, ಆಡಳಿತ ಮಂಡಳಿ ಸದಸ್ಯರು, ಕಾರ್ಮಿಕರು, ರೈತರು, ಕಛೇರಿ ಸಿಬ್ಬಂದಿ, ಸಾರ್ವಜನಿಕರಿದ್ದರು. ಕಾರ್ಮಿಕ ಸಂಘದ ಉಪಾಧ್ಯಕ್ಷ ನನಾರಾಯಣ ಜೋಶಿ ಸ್ವಾಗತಿಸಿದರು. ಸುರೇಶ ಗಣಾಚಾರಿ ನಿರೂಪಿಸಿದರು, ಈಶ್ವರ ವಂದಿಸಿದರು.