ಅನಿಲಕುಮಾರ ಇರಾಜಗೆ ಪಿ.ಎಚ್.ಡಿ
ತಾಳಿಕೋಟೆ:ಆ.26: ಪಟ್ಟಣದ ಎಸ್.ಕೆ.ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಹಿಂದಿ ವಿಷಯ ಶಿಕ್ಷಕ ಅನಿಲಕುಮಾರ ಬಿ.ಇರಾಜ ಇವರು ಧಾರವಾಡದ ಬಿ.ಈಡಿ.ಕಾಲೇಜು ಪ್ರಾಚಾರ್ಯ ಡಾ.ಸಿ.ಎಂ.ಅಡಕಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಆಲೋಕ ಶರ್ಮಾಕೆ ಉಪನ್ಯಾಸ : ಸಮೀಕ್ಷಾತ್ಮಕ ಅಧ್ಯಯನ’ ಎಂಬ ಸಂಶೋದನಾ ಪ್ರಬಂಧಕ್ಕೆ ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಪಿ.ಎಚ್.ಡಿ ಪದವಿ ನೀಡಿದೆ.
ಮಧ್ಯ ಪ್ರದೇಶದ ಇಂದೋರನ ಖ್ಯಾತ ಹಿಂದಿ ಸಾಹಿತಿ ಆಲೋಕ ಶರ್ಮಾ ಅವರ ಕಾದಂಬರಿಗಳ ಮೇಲೆ ಅಧ್ಯಯನ ನಡೆಸಿ ಪಿ.ಎಚ್.ಡಿ ಸಂಶೋದನೆ ನಡೆಸಿದ್ದರು.
ಅವರಿಗೆ ಹಿಂದಿ ವಿಭಾಗ ಅಧ್ಯಕ್ಷ ಧಾರವಾಡದ ಡಾ.ರಾಜಕುಮಾರ ರಾಠೋಡ, ನಿವೃತ್ತ ಹಿಂದಿ ವಿಭಾಗದ ಅಧ್ಯಕ್ಷೆ ಡಾ.ಅಮರಜ್ಯೋತಿ ಅವರು ಸಲಹೆ ನೀಡಿದರು.
ತಾಳಿಕೋಟೆ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ಕೆ.ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 1992 ರಿಂದ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದಾರೆ. ಅವರಿಗೆ ಬೆಳಗಾವಿ ವಿಭಾಗ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಜಿಲ್ಲಾಮಟ್ಟದ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗಳು ಕೂಡಾ ಬಂದಿವೆ.