ಅ.ಭಾ.ಹೊರನಾಡ ಕನ್ನಡ ಸಂಘಗಳ 9ನೇ ಮಹಾಮೇಳದ ಗೋಷ್ಠಿ
ಧಾರವಾಡ, ಆ26: ನಿಜವಾದ ಕನ್ನಡ ನೆಲವೆಂದರೆ ಅದು ಆದವಾನಿ. ಬುದ್ಧಗಿರಿ ಮತ್ತು ಸೊನ್ನಗಿರಿಯ ಹದಿನೇಳು ಶಾಸನಗಳು ಒಂದೇ ಜಾಗದಲ್ಲಿ ಬ್ರಹ್ಮಗಿರಿಯಲ್ಲಿ ದೊರೆತಿವೆ. ಬದನೇಹಾಳ ಸಮೀಪದಲ್ಲಿರುವ ಮ್ಯಾಕದೋನ ಶಾಸನದಲ್ಲಿ ಶಾತವಾಹನರ ಕೊನೆಯ ಅರಸನ ಇತಿಹಾಸವಿದೆ. ಅಂದು ಅಲ್ಲಿ ಇದ್ದ ದೊಡ್ಡ ಪಟ್ಟಣ ಇಂದು ಅಲ್ಲಿ ಕಾಣದಾಗಿದೆ ಎಂದು ಸಿಂಧನೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಕೆ. ಖಾದರಭಾಷ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಎಲ್ಲ ಕನ್ನಡ ಸಂಘಗಳ ಸಹಯೋಗದಲ್ಲಿ ಆಂಧ್ರಪ್ರದೇಶದ ಆದವಾನಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9ನೇ ಮಹಾಮೇಳದ ಮೊದಲ ಗೋಷ್ಠಿಯಲ್ಲಿ Àಆಂಧ್ರ ಗಡಿನಾಡ ಸಾಂಸ್ಕøತಿಕ ಶಾಸನಗಳು' ಕುರಿತು ವಿಷಯ ಮಂಡನೆ ಮಾಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಶಾತವಾಹನರು ಇದೇ ಭಾಗಕ್ಕೆ ಸೇರಿದವರಾಗಿದ್ದರು ಎಂಬುದು ನಮ್ಮ ಜನರಿಗೇ ಗೊತ್ತಿಲ್ಲ. ಶಾತನಾವಾಹನ ಕೊನೆಯ ರಾಜ ಮೂರನೇ ಕುಲಬಾಯಿಗೆ ಆಶ್ರಯವಿಕ್ಕಿದ್ದು ಮ್ಯಾಕದೋನಿನಗರ. ಇಲ್ಲಿ ಕೊನೆಯ ರಾಜ ಹಾಕಿಸಿದ ಶಾಸನದಲ್ಲಿಯ ಪಟ್ಟಣ ಹುಡುಕಿದರೆ ಅಲ್ಲಿ ಬೆಟ್ಟ ಮಾತ್ರ ಇದೆ. ಏವಪುರ ಎಂಬ ಅದ್ಭುತವಾದ ಪಟ್ಟಣದ ಯಾವ ಕುರುಹೂ ಇಲ್ಲವಾಗಿವೆ. ಅದು ಏನಾಯಿತು? ತುಂಗಭದ್ರೆ ಹತ್ತಿರ ಶಿಲಾಶಾಸನಗಳ ಊರು ಸಾತನೂರು ಶಾತವಾಹನರಿಗೆ ಸಂಬಂಧಿಸಿದ ಕುರುಗಳಾದ ಐದನೇ ಬ್ರಾಹ್ಮಣ ಅಂದವೃತ್ಯ ಎಂಬ ಶಬ್ದ ಬರುತ್ತದೆ ಎಂದರು. ರಂಜಾನಸಾಬ ಮೇಲವರ್ಗಕ್ಕೆ ಸಂಬಂಧಿಸಿದವನಾಗಿದ್ದರೆ ನವ್ಹಂಬರ 1ಕ್ಕೆ ವೈಭವದಿಂದ ಮೆರವಣಿಗೆ ಮಾಡುತ್ತಿದ್ದರೇನೋ ಕರ್ನಾಟಕ ವಿದ್ಯಾವರ್ಧಕ ಸಂಘ ಅವರನ್ನ ಸ್ಮರಿಸಿಕೊಳ್ಳುತ್ತಿರುವುದು ಅಭಿನಂದನೀಯ. ಕನ್ನಡ ಶಾಲೆ ಮುಚ್ಚಿ ಹೋಗತ್ತದೆ ಎಂದು ತಿಳಿದು ಬದನೆಹಾಳ ಕನ್ನಡ ಶಾಲೆಗೆ ತಂದು ಹಚ್ಚಿದ ಅಚ್ಚ ಕನ್ನಡ ಕಲಿ, ಕನ್ನಡ ಉಳಿಸುವ ಸಂಬಂಧವಾಗಿ ಇಳಿವಯಸ್ಸಿನಲ್ಲೂ ಪತ್ರಗಳ ಮೂಲಕ ಇಲಾಖೆಗಳನ್ನು ಜಾಗೃತಗೊಳಿಸುವಲ್ಲಿ ಇವರನ್ನು ಮೀರಿದವರಿಲ್ಲ ಎಂದರು.
ಈ ಪ್ರದೇಶವು ಬಿಜಾಪೂರ ಆದಿಲ್‍ಶಾಹಿ ಆಡಳಿತಕ್ಕೆ ಒಳಪಟ್ಟಿತ್ತು.ನೀನು ಮಾಡಿದ್ದು ತಪ್ಪು ಎಂದು ಎತ್ತಿ ತೋರಿಸಿದ ಶಾಸನ ಕೌತಾಳ ಶಾಸನ’. ತೆರಿಗೆಯನ್ನು ಹೆಚ್ಚಿಸಿದ ರಾಜನ ನೀತಿಯನ್ನು ವಿರೋಧಿಸಿ ಊರು ತೊರೆದಾಗ ರಾಜ ತನ್ನ ಮನೆತನದ ತಪ್ಪನ್ನು ತಿದ್ದಿಕೊಳ್ಳುವುದಾಗಿ ಹೇಳಿ ಊರು ತೊರೆದವರನ್ನು ಮರಳಿ ಕರೆಯಿಸಿದ್ದನ್ನು ಶಾನಸದೊಳಗೆ ಕೆತ್ತಿಸಿ ದಾಖಲಿಸಿದವರು.
ಸಾಹಿತ್ಯ, ಸಂಸ್ಕøತಿ ಅದ್ಭುತವಾದ ರೀತಿಯಲ್ಲಿ ಅಡಗಿಕೊಂಡ ಈ ಪ್ರದೇಶದ ಇತಿಹಾಸವನ್ನು ಬಗೆದಷ್ಟು ಇದೆ.ಯಾದವಗಿರಿಯನ್ನು ಆದವಾನಿ ಎಂದು ಕರೆಯಲಾಗುತ್ತಿದೆ. ನಮ್ಮ ಈ ನೆಲದ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಿ ನಿರುದ್ಯೋಗಿಗಳಾಗಿ ಕುಳಿತಿದ್ದಾರೆ. ಕರ್ನಾಟಕ ಸರಕಾರ ನಮ್ಮ ಕನ್ನಡ ಮಕ್ಕಳಿಗೆ ಎರಡು ಪರ್ಸೆಂಟೀಜ್ ಉದ್ಯೋಗ ಕಲ್ಪಿಸುವಂತೆ ಮಾಡಿ ನಮ್ಮ ಮಕ್ಕಳ ಭವಿಷ್ಯಕ್ಕೆ ಬೆಳಕಾಗುವ ಮನಸ್ಸು ಕರ್ನಾಟಕ ಸರಕಾರ ಮಾಡುವಂತಾಗಲಿ ಎಂದು ಖಾದರಭಾಷ ಸರಕಾರಕ್ಕೆ ಆಗ್ರಹಿಸಿದರು.
ಕರ್ನಾಟಕ ಏಕೀಕರಣದಲ್ಲಿ ಕರ್ನೂಲ್ ಅನಂತಪುರ ಜಿಲ್ಲೆಯ ಹೋರಾಟ ಕುರಿತು ಅನಂತಪುರ ಜಿಲ್ಲೆ ಸಿದ್ಧಾಪುರ ಶಿಕ್ಷಕ ಎಂ. ಗಿರಿಜಾಪತಿ ವಿಷಯ ಮಂಡಿಸಿದರು. ಆದವಾನಿಯ ಕನ್ನಡ ಸಂಘದ ಕಾರ್ಯದರ್ಶಿ ಜಿ. ಗುರುಬಸವರಾಜ ಪ್ರತಿಕ್ರಿಯಿಸಿದರು. ಬಳ್ಳಾರಿ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಅಧ್ಯಕ್ಷತೆ ವಹಿಸಿದ್ದರು.
ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ. ವಿಮಲ ಸ್ವಾಗತಿಸಿದರು. ಎಂ. ಆದಿಬಸವರಾಜ ವಂದಿಸಿದರು. ಕೆ. ಜಂಬುನಾಥ ನಿರೂಪಿಸಿದರು.