ಹಿರೂರ : ವಲಯಮಟ್ಟದ ಕ್ರೀಡಾಕೂಟ ಉದ್ಘಾಟನೆ
ತಾಳಿಕೋಟೆ:ಆ.26: ತಾಲೂಕಿನ ಹಿರೂರ ಗ್ರಾಮದ ಶ್ರೀ ಭೋಗೇಶ್ವರ ಪ್ರೌಢ ಶಾಲಾ ಆವರಣದಲ್ಲಿ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಹಿರೂರ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀ ಚನ್ನಮಲಯ್ಯ ಹಿರೇಮಠ ಸ್ವಾಮಿಗಳು ಕ್ರೀಡಾ ಕೂಟ ಕಾರ್ಯಕ್ರಮವನ್ನು ಜ್ಯೋತಿಬೆಳಗಿಸುವದರೊಂದಿಗೆ ಉದ್ಘಾಟಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು ಕ್ರೀಡೆ ಮಾನಸಿಕವಾಗಿ ದೈಹಿಕವಾಗಿ ಸದೃಡಗೊಳಿಸಲು ಪ್ರೇರಣಾದಾಯಕ ಶಕ್ತಿ ಹೊಂದಿವೆ ಸೋಲು ಗೆಲವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದ ದ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಳಿಕೋಟೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತೀನ ಅಧ್ಯಕ್ಷ ನಿವೃತ್ತ ದೈಹಿಕ ಶಿಕ್ಷಕರಾದ ಆರ್ ಎಲ್ ಕೊಪ್ಪದ ಅವರು ಮಾಜಿ ಸಚಿವ ಮುತ್ಸದ್ದಿ ರಾಜಕಾರಣಿ ದಿ|| ಬಿ ಎಸ್ ಪಾಟೀಲ (ಸಾಸನೂರ) ಅವರು ಗ್ರಾಮೀಣ ಭಾಗದಲ್ಲಿ ಸುಸಜ್ಜಿತವಾದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಡ ಮಕ್ಕಳ ಏಳಿಗೆಗಾಗಿ ಶ್ರಮಿಸಿದಂತಹ ವ್ಯಕ್ತಿಯಾಗಿದ್ದಾರೆ ಅವರು ಇಲ್ಲದಿದ್ದರೆ ಅವರು ನೆಟ್ಟ ಶಿಕ್ಷಣವೆಂಬ ಆಲದ ಮರ ಇಂದು ಬೃಹತ್ ಆಕಾರದಲ್ಲಿ ಬೆಳೆದು ನಿಂತಿದೆ ಶಿಕ್ಷಣ ಮತ್ತು ಕ್ರೀಡೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಶಿಕ್ಷಣ ಬೌದ್ಧಿಕ ಶಿಕ್ಷಣಕ್ಕೆ ಪೂರಕವಾಗಿದ್ದರೆ, ದೈಹಿಕ ಶಿಕ್ಷಣವು ದೈಹಿಕ ಬೆಳವಣಿಗೆಗೆ ಪೂರಕವಾಗುತ್ತದೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಗೆಲವು ಸೋಲು ಸಮಾನವಾಗಿ ಸ್ವೀಕರಿಸಬೇಕು ಗೆದ್ದೆ ಎಂಬ ಅಹಂಭಾವ ಬೇಡಾ ಸೋತೆ ಎಂಬ ಕಲ್ಮಷಭಾವನೆ ಬೇಡಾ ಕ್ರೀಡೆ ಯಾವಾಗಲು ಕ್ರೀಡೆಯಾಗಿರಲಿ ಮುಂದಿನ ಓದಿನಲ್ಲಿ ಎಲ್ಲರೂ ಸ್ನೇಹಿತರಾಗಿ ಮುಂದುವರೆಯಲಿದ್ದೀರಿ ಆಟದ ಜೊತೆ ಪಾಠಕ್ಕೂ ಆದ್ಯತೆ ನೀಡಿ ಎಂದರು.
ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ರಾವುತ ಪೂಜಾರಿಯವರು ಪ್ರಾಸ್ತಾವಿಕ ಮಾತನಾಡಿದರು.
ಈ ಸಮಯದಲ್ಲಿ ಗ್ರಾಮದ ಮುಖಂಡರಾದ ಗುರಣ್ಣ ಚೌದ್ರಿ, ಸಂಗನಗೌಡ ಬಿರಾದಾರ, ಸಿದ್ದಣ್ಣ ಚೌದ್ರಿ, ಬಿ.ಬಿ ಬಿರಾದಾರ, ಡಿ.ಬಿ ಹಾದಿಮನಿ, ಬಸವರಾಜ ಬಡಿಗೇರ, ಡಾ|| ಪಿ.ಸಿ ಕವಡಿಮಟ್ಟಿ, ಗ್ರಂಥಪಾಲಕ ಎಚ್.ಬಿ ಬಿರಾದಾರ, ಶರಣಪ್ಪ ತಳವಾರ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶಿಕ್ಷಕರಾದ ಎಸ್.ವ್ಹಿ ದೋರನಹಳ್ಳಿ, ಡಿ.ಡಿ ಲಮಾಣಿ ನಿರೂಪಿಸಿದರು. ಮುಖ್ಯಾಧ್ಯಪಕರಾದ ಬಿ.ಎಚ್ ಏವೂರ ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ಎಸ್.ಆರ್ ಅಂಬ್ಲ್ಯಾಳ ವಂದಿಸಿದರು.