ಮದರ್ ತೆರೆಸ್ಸಾರ ಸಾಮಾಜಿಕ ಕೊಡುಗೆ ಅನನ್ಯ
ಕಲಬುರಗಿ :ಆ.26: ಇಡೀ ತಮ್ಮ ಜೀವನದುದ್ದಕ್ಕೂ ಅನಾಥರು, ರೋಗಿಗಳು, ಬಡವರ ಸೇವೆ ಮಾಡುವ ಮೂಲಕ ಎಲ್ಲರ ‘ತಾಯಿ’ಯಾದ ಮದರ್ ತೆರೆಸ್ಸಾ ಅವರ ಸಾಮಾಜಿಕ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಮಹಾಗಾಂವ ಕ್ರಾಸ್ ಸಮೀಪವಿರುವ ಸಂಜೀವಿನಿ ವೃದ್ಧಾಶ್ರಮ ಮತ್ತು ಚಿಗುರು ಮಕ್ಕಳ ಅನಾಥಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ ಮದರ್ ತೆರೆಸ್ಸಾ ಅವರ 114ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು. ವೃದ್ಧಾಶ್ರಮದ ಮುಖ್ಯಸ್ಥ ಶರಣು ಎ.ಕಮಠಾಣ ಮಾತನಾಡಿ, ಮದರ್ ತೆರೆಸ್ಸಾ ಅವರಲ್ಲಿರುವ ಸಾಮಾಜಿಕ ಕಾಳಜಿ ಮಾದರಿಯಾಗಿದೆ. ಅವರು ಕರುಣೆಯ ಸಾಕಾರ ಮೂರ್ತಿಯಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮಹಿಳಾ ಚಿಂತಕಿ ಜಯಶ್ರೀ ಎಚ್.ಪಾಟೀಲ, ಸಿದ್ದೇಶ ಬಿ.ಸ್ವಾಮಿ, ಭೀಮಶ್ಯಾ ಪಾಟೀಲ, ಕಾಮಣ್ಣ ಮದಗುಣಕಿ, ಶಿವಪುತ್ರ ಬೆಣ್ಣೂರ , ಪೂಜಾ ಲೇಂಗಟಿ, ಪಲ್ಲವಿ, ಪಿಂಕು, ಅಕ್ಷತಾ, ಗಣೇಶ, ತನುಜಾ, ದೀಕ್ಷಾ,ಆದಿತ್ಯಾ,ಸಾಯಿ, ಮಹೇಶ, ಶೃದ್ಧಾ, ವಿದ್ಯಾಶ್ರೀ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.