ಸಂಜೆ ಕಲಹಾಳೇಶ್ವರ ರಥೋತ್ಸವ
ಬಾದಾಮಿ,ಆ.26: ತಾಲ್ಲೂಕಿನ ಬೆಳವಲಕೊಪ್ಪ ಗ್ರಾಮದ ಆರಾಧ್ಯದೈವ ಕಲಹಾಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು(ಅ.26) ಸೋಮವಾರ ಸಂಜೆ 5:30ಕ್ಕೆ ಕಲಹಾಳೇಶ್ವರರ ರಥೋತ್ಸವ ಜರುಗಲಿದೆ.
ಸಾಯಂಕಾಲ 5:30ಕ್ಕೆ ಕಲಹಾಳೆಶ್ವರ ಮಹಾರಥೋತ್ಸವ ಹಾಗೂ ರಾತ್ರಿ 10:30 ಗಂಟೆಗೆ ಕಲಹಾಳೇಶ್ವರ ಯುವಕ ಮಿತ್ರರಿಂದ ಸಿಂಧೂರ ಹುಲಿ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಜಾತ್ರಾ ಕಮೀಟಿಯ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.