ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸೇವೆ ಶ್ಲಾಘನೀಯ
ಅಥಣಿ :ಆ.26: ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೇವಾ ಕಾರ್ಯಗಳು ಶ್ಲಾಘನೀಯ. ಅಥಣಿ ತಾಲ್ಲೂಕಿನ ಮಧಬಾವಿ ವಲಯದ ಅಬ್ಬಿಹಾಳ ಕಾರ್ಯಕ್ಷೇತ್ರದ ತಾಂವಶಿ ಗ್ರಾಮದ ಮಲ್ಲಿಕಾರ್ಜುನ್ ದೇವಸ್ಥಾನ ಜಿರ್ಣೋದ್ಧಾರಕ್ಕೆ ಡಾ. ವೀರೇಂದ್ರ ಹೆಗಡೆ ಅವರು ಮಂಜೂರಾತಿ ನೀಡಿರುವ 1.50.000 (ಒಂದು ಲಕ್ಷ ಐವತ್ತು ಸಾವಿರ ರೂ.ಗಳು) ಡಿ ಡಿ ಯನ್ನು ತಾಲೂಕಾ ಯೋಜನಾಧಿಕಾರಿ ಸಂಜೀವ ಮರಾಠಿ, ವಿತರಿಸಿದರು.
ಡಿ.ಡಿ ವಿತರಣಾ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಕಮಿಟಿಯ ಸದಸ್ಯರು ಗ್ರಾಮದ ಗುರು ಹಿರಿಯರು ಗಣ್ಯರು ಸೇರಿದಂತೆ ಮೇಲ್ವಿಚಾರಕ ಸಂತೋಷ ಗಂದಿಗವಾಡ ಸ್ವಸಹಾಯ ಸಂಘದ ಸದಸ್ಯರು ಸೇವಾ ಪ್ರತಿನಿಧಿ ಅವರು ಉಪಸ್ಥಿತರಿದ್ದರು.