ಅ.31 ರಂದು ಗಜಾನನ ಮಂದಿರ 27 ನೇ ವಾರ್ಷಿಕೋತ್ಸವ
ಇಂಡಿ : ಆ.26:ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಗಜಾನನ ಮಂದಿರದ 27 ನೇ ವಾರ್ಷಿಕೋತ್ಸವ ಶನಿವಾರ ಅ. 31 ರಂದು ಜರುಗಲಿದೆ ಎಂದು ರಾಮಕೃಷ್ಣ ಜೋಶಿ ತಿಳಿಸಿದ್ದಾರೆ.
31 ರಂದು ಬೆಳಗ್ಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ಮತ್ತು ಶ್ರೀ ಸತ್ಯನಾರಾಯಣ ಪೂಜೆ ಮತ್ತು ಕಥಾ ಶ್ರವಣ ವಿರುತ್ತದೆ.
ಮತ್ತು ಸಾಯಂಕಾಲ 7 ಗಂಟೆಗೆ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿ ಭಜನೆಯ ಕಾರ್ಯಕ್ರಮ ಇರುತ್ತದೆ.
ಭಕ್ತಮಂಡಳಿ ಮತ್ತು ಮಹಿಳೆಯರು, ವಿಪ್ರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ದೇವಸ್ಥಾನ ಸಮಿತಿಯ ರಾಮಕೃಷ್ಣ ಜೋಶಿ ವಿನಂತಿಸಿದ್ದಾರೆ.