ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಸಂಘಟಿತ ಹೋರಾಟಕ್ಕೆ ಯಳಸಂಗಿ ಕರೆ
ಆಳಂದ:ಆ.26: ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಅವರಿಗೆ ಸೌಲಭ್ಯಗಳನ್ನು ಕಲ್ಪಿಸಲು 104 ವರ್ಷಗಳಿಂದ ಸತತವಾಗಿ ಸಂಘಟಿತ ಹೋರಾಟ ನಡೆಸುತ್ತಿರುವ ಎಐಸಿಟಿಯು ಸಂಘಟನೆಯ ರಾಷ್ಟ್ರೀಯ ಸಮ್ಮೇಳನವು 42 ವರ್ಷದ ಬಳಿಕ ಮುಂಬರುವ ದಿನಗಳಲ್ಲಿ ಬೆಂಗೂರಿನಲ್ಲಿ ಜರುಗಿಸಲು ಸಿದ್ಧತೆ ನಡೆದಿದೆ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ ಅವರು ಹೇಳಿದರು.
ಪಟ್ಟಣದ ಉಮರಗಾ ರಸ್ತೆಯಲ್ಲಿನ ಆಲ್ ಇಂಡಿಯಾ ಟ್ರೇಡ್ ಯುನಿಯನ್ ಕಾಂಗ್ರೆಸ್ (ಎಐಟಿಯುಸಿ) ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಘಟಕದ 3ನೇ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸಮ್ಮೇಳನಗಳ ಭಾಗವಾಗಿ ರಾಜ್ಯದೆಲ್ಲಡೆ ಜಿಲ್ಲಾ ಮತ್ತು ತಾಲೂಕು ಸಮಾವೇಶಗಳನ್ನು ಕೈಗೊಂಡು ಬಳಿಕ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಈ ಕುರಿತು ಭರದ ಸಿದ್ಧತೆ ನಡೆಯತೊಡಗಿದೆ. ಕಾರ್ಮಿಕರು ತಮ್ಮ ಸಂಘಟಿತ ಶಕ್ತಿಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗೆ ಒತ್ತು ನೀಡುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವು ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ಕಾರ್ಮಿಕರ 42 ಕಾನೂನುಗಳನ್ನು ಮುರಿದು ಕಾರ್ಮಿಕ ವಿರೋಧಿ ಕಾನೂನುಗಳು ಜಾರಿಗೆ ತರುವ ಮೂಲಕ ದೇಶದ ಸಂಪತ್ತು ಬಂಡವಾಳ ಶಾಹಿ ಪಾಲಾಗಿಸಿ ಶ್ರಮಿಕರನ್ನು ಬೀದಿಪಾಲಾಗಿಸಲು ಹೋರಟಿದೆ ಎಂದು ಆರೋಪಿಸಿದರು.
ಕಾರ್ಮಿಕರು 16 ಗಂಟೆ ದುಡಿಯಬೇಕೆಂದಿದ್ದ ಸರ್ಕಾರವು 8:00ಗಂಟೆಗಳಿಗೆ ಕಾಯ್ದುಕೊಂಡಿದ್ದು ಹೋರಾಟದ ಫಲವಾಗಿದೆ ಎಂದು ಹೇಳಿದರು.
ಕಾರ್ಮಿಕ ವಿರೋಧಿ ಕಾನೂನು ರದ್ದುಪಡಿಸಬೇಕು. ಕಟ್ಟಡ ಕಾರ್ಮಿಕರಿಗೆ ಮನೆ ಸೇರಿ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಹಲವು ಬೇಡಿಕೆಗಳಿಗೆ ರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಸಮ್ಮೇಳನದ ಯಶಸ್ವಿಗೆ ರಾಜ್ಯದೆಯಲ್ಲಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನಿಡಿದರು.
ಸಮಾವೇಶದಲ್ಲಿ ಧ್ವಜಾರೋಹಣ ನೆರವೇರಿಸಿದ ಕಿಸಾನಸಭಾ ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ನ್ಯಾಯವಾದಿ, ಕಿಸಾನಸಭಾ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಹಣಮಂತರಾವ್ ಅಟ್ಟೂರ ಸೇರಿದಂತೆ ಇನ್ನಿತರ ಸಂಘಟನೆಯ ಮುಖಂಡರು ಸಮಾವೇಶ ಕುರಿತು ಮಾತನಾಡಿ, ಕಾರ್ಮಿಕರು ತಮ್ಮ ಹಕ್ಕಿನ ಹೋರಾಟಕ್ಕೆ ಸಂಘಟಿತರಾಗಬೇಕು ಎಂದು ಹೇಳಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ದತ್ತಾತ್ರೆಯ ಕಬಾಡೆ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶಿವಲಿಂಗಮ್ಮ ವಿ. ಲೆಂಗಟಿಕರ್, ಕೆಎಸ್‍ಆರ್‍ಟಿಸಿ ಸಂಘಟನೆಯ ಬಾಬುರಾವ್ ಲಾವಣಿ, ಶ್ರೀಶೈಲ ಶ್ರೀಗಣಿ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ಶೇಖ ಫಯಾಜ್, ಅಂಗನವಾಡಿ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಮ್ಮ ಕಲಶೆ ಟ್ಟಿ, ಸಂಘಟನೆಯ ಖಜೂರಿ ವಲಯದ ಅಧ್ಯಕ್ಷ ರಫೀಕ್ ನಿಂಬಾಳ, ಮಾದನಹಿಪ್ಪರಗಾ ಅಧ್ಯಕ್ಷ ಮಲ್ಲಪ್ಪ ಹಲಗೆ, ನಿಂಬರಗಾ ಅಧ್ಯಕ್ಷ ಯಲ್ಲಾಲಿಂಗ ಮಾಂಗ್, ಆಟೋ ಸಂಘದ ಮಹ್ಮದ್ ಹುಸೇನಿ, ಶ್ರೀಮಂತ ನಡಗೇರಿ, ಫಕ್ರೋದ್ದೀನ್ ಗೋಳಾ, ಶೋಭಾ ರಾಮಮೂರ್ತಿ ಗಾಯಕವಾಡ, ಪ್ರಕಾಶ ಜಾನೆ, ಮಹಾನಂದ ತುಕಾಣೆ ಅನೇಕರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಅಪ್ಪಾಸಾಬ ತೀರ್ಥೆ ಅವರನ್ನು ಸನ್ಮಾನಿಸಲಾಯಿತು.
ಅಣವೀರಪ್ಪ ಪಾಂಚಳ, ಕಲ್ಯಾಣಿ ತುಕಾಣೆ ನಿರೂಪಿಸಿದರು. ಜಗನಾಥ ಗುಂಡಗುರ್ತಿ ವಂದಿಸಿದರು.