ನಾಳೆಯಿಂದ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ 9 ನೇ ವರ್ಷದ ದಸರಾ ಮಹೋತ್ಸವ
( ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.2: ಇಲ್ಲಿನ ಪಟೇಲ್ ನಗರದ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ 9 ನೇ ವರ್ಷದ ದಸರಾ ಶರನ್ನವರಾತ್ರಿ ವೈಭವದ ಉತ್ಸವಗಳನ್ನು ಹಮ್ಮಿಕೊಂಡಿದೆಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮೀನಳ್ಳಿ ತಾಯಣ್ಣ ಹೇಳಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಈ ಮಾಹಿತಿ ನೀಡಿದ ಅವರು. ಆ 3ರಿಂದ 12 ರ ವರೆಗೆ ದಸರಾ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿದಿನ ದೇವಿಗೆ ಅಭಿಷೇಕ, ಮಂಗಳ ರಾತಿ, ವಿವಿಧ ಅಲಂಕಾರ ಮಾಡಲಿದ್ದು, ಸಂಜೆ 4.30ಕ್ಕೆ ಹೋಮ ನಡೆಯಲಿದೆ.
ನಾಳೆ ಸೆ.3 ರಂದು ಬಾಲ ತ್ರಿಪುರ ಸುಂದರಿ ದೇವಿ ಅಲಂಕಾರ ಮತ್ತು ಮಹಾ ಗಣಪತಿ ಹೋಮ, ಸಂಜೆ 5 ರಿಂದ ಮಹಿಳೆಯರಿಂದ ವೇದ ಮಂತ್ರ ಪಠಣ, ನಡೆಯಲಿದೆ. ಅ4 ರಂದು ಗಾಯತ್ರಿದೇವಿ ಅಲಂಕಾರ ಮತ್ತು ಹೇಮಗ್ರೀವ ಹೋಮ,  ಆ 5 ರಂದು  ಲಲಿತದೇವಿ  ಅಲಂಕಾರ, ಲಲಿತಾದೇವಿ ಹೋಮ ನಡೆಯಲಿದೆ.
ಅ 6 ರಂದು ಅನ್ನಪೂರ್ಣೇಶ್ವರಿ ದೇವಿ ಅಲಂಕಾರ, ಮತ್ತು  ಆದಿತ್ಯಾದಿ ನವಗ್ರಹ ಹೋಮ  ನಡೆಯಲಿದೆ. ಆ7 ರಂದು ಆರ್ಧನಾರೀಶ್ವರದೇವಿ ಅಲಂಕಾರ ಮತ್ತು ನರಸಿಂಹ ಹೋಮ ನಡೆಯಲಿದ್ದು ಅಂದು ಸಂಜೆ 4 ಕ್ಕೆ ಶ್ರೀಶೈಲ ಭ್ರಮರಾಂಭಿಕ ಮಲ್ಲಿಕಾರ್ಜುನ ಕಲ್ಯಾಣೋತ್ಸವ, ರಾತ್ರಿ 9 ಕ್ಕೆ ಅನ್ನಪ್ರಸಾದವಿದೆ.
ಅ.8 ರಂದು ಮಹಾಲಕ್ಷ್ಮಿ ದೇವಿ ಅಲಂಕಾರ  ಹಾಗು ಅಷ್ಟಲಕ್ಷ್ಮಿ ಹೋಮ, ಆ 9 ರಂದು ಸರಸ್ವತಿ ದೇವಿ ಅಲಂಕಾರ ಮತ್ತು ಸರಸ್ವತಿ ಹೋಮ ಅಲ್ಲದೆ ಮಕ್ಕಳಿಗೆ ಅಕ್ಷರಭ್ಯಾಸ ನಡೆಯಲಿದೆ.
ಅ.10 ರಂದು ದುರ್ಗಾದೇವಿ ಅಲಂಕಾರ, ಮಹಾ ಚಂಡಿಯಾಗ, ಮಧ್ಯಾಹ್ನ 12.30 ಕ್ಕೆ ಅನ್ನಪ್ರಸಾದ ನಡೆಯಲಿದೆ.
ಅ.11 ರಂದು ಮಹಿಷಾಸುರ ಮರ್ದಿನಿ ದೇವಿ ಅಲಂಕಾರ. ಅ.12 ರಂದು ನಿಜರೂಪ ಅಲಂಕಾರ, ಮಧ್ಯಾಹ್ನ 3 ಕ್ಕೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.
ಪ್ರತಿದಿನ ಸಂಜೆ 8.45 ಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಇರಲಿದ್ದು. ಪ್ರತಿದಿನ  2 ರಿಂದ 3 ನೂರು ಜನರಿಗೆ ಉಡಿ ತುಂಬಲಿದೆ ಒಟ್ಟಾರೆ 1008  ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಪ್ರತಿದಿನ ಬೆಳಿಗ್ಗೆ 9 ರಿಂದ 11.30 ರ ವರೆಗೆ ಹಮ್ಮಿಕೊಂಡಿದ್ದು. ಇದಕ್ಕಾಗಿ ಜನರಿಂದ ನೋಂದಣಿ ನಡೆಯಲಿದೆ.
ಪ್ರತಿದಿನ ಸಂಜೆ ಜಾನಪದ ಗೀತೆ, ಜಾದು, ನೃತ್ಯ, ಸಂಗೀತ ಮೊದಲಾದ ಸಾಂಸ್ಕೃ ತಿಕ ಕಾರ್ಯಕ್ರಮಗಳ ಪ್ರದರ್ಶನ ಹಮ್ಮಿಕೊಂಡಿದೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ದೇವಸ್ಥಾನದ ಆಡ ಮಂಡಳಿಯ ಗೌರವ ಅಧ್ಯಕ್ಷ ಸಿ.ಎಸ್.ಸತ್ಯನಾರಾಯಣ, ಕೃಷ್ಣ(ಕಿಟ್ಟಿ), ಅಬಕಾರಿ ಹನುಂಮತಪ್ಪ, ಡಿಸ್, ರಮೇಶ್, ವಿಜಯ್, ತಿಪ್ಪಣ್ಣ,  ಸುರೇಶ್, ರಾಧಮ್ಮ, ಎರ್ರಿಸ್ವಾಮಿ, ಅರ್ಚಕ ಸಂತೋಷ್ ಮೊದಲಾದವರು ಇದ್ದರು.