ಗ್ರಾ ಪಂ ಸದಸ್ಯರಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಅ.02 ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅ.04 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ತಾಲೂಕು ಆಧ್ಯಕ್ಷೆ ಮಮತಾ ತಳವಾರ್ ಹೇಳಿದರು.
ಸೋಮವಾರ ಪಟ್ಟಣದ  ತಾ ಪಂ ಆವರಣದಲ್ಲಿ ಪತ್ರಿಕೆಯ ಹೇಳಿಕೆ ನೀಡಿ ಗ್ರಾ ಪಂ ವ್ಯಾಪ್ತಿಯ ಅಧಿಕಾರವನ್ನು ಮೊಟಕು ಗೊಳಿಸಿ ತಮಗೆ ತೋಚಿದಂತೆ ಕೆಲಸ ಮಾಡುತ್ತಿದ್ದಾರೆ ಮೇಲಾಧಿಕಾರಿಗಳು. ಗ್ರಾ ಪಂ ಸಿಬ್ಬಂದಿ ಸೇರಿದಂತೆ ಸದಸ್ಯರು   ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಸ್ಪಂದನೆ ಇಲ್ಲದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯ ಒಕ್ಕೂಟದ ಗೌರವಾಧ್ಯಕ್ಷ ಮಾಜಿ ಸೈನಿಕ ರಾಮಿ ರೆಡ್ಡಿ,
ಬಸನಗೌಡ ಪಾಟೀಲ್ ಅಧ್ಯಕ್ಷರು ಗ್ರಾ ಪಂ, ಮೂಗಮ್ಮ ಜಯಪ್ಪ ಮಾಜಿ ಅಧ್ಯಕ್ಷರು  ಮೆಹಬೂಬ್ ಸಂಡೂರ್,ಸದಸ್ಯರು
ಸಲೀಂ ಖಾಜಾ ಸಾಬ್ ಸದಸ್ಯರು ಇದ್ದರು