ಪಕ್ಷಾತೀತವಾಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸೋಣ: ನೇಮಿರಾಜ್ ನಾಯ್ಕ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಅ.02 ಪುರಸಭೆಯ ವ್ಯಾಪ್ತಿಯ ಪ್ರತಿಯೊಂದು ವಾರ್ಡುಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸೋಣ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಹೇಳಿದರು.
 ಪಟ್ಟಣದ ಕನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಪುರಸಭೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌರಕಾರ್ಮಿಕರು ನಿಜವಾದ ಕಾಯಕ ಜೀವಿಗಳು ಸೂರ್ಯ ಹುಟ್ಟುವ ಮುಂಚೆ ಇಡೀ ನಗರವನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುತ್ತಾರೆ. ಅವರ ಆರೋಗ್ಯವೂ ಕೂಡ ಅಷ್ಟೇ ಮುಖ್ಯವಾಗಿದೆ. ನಾವುಗಳು ಸ್ವಲ್ಪ ಗಬ್ಬು ವಾಸನೆ ಬಂದರೆ ಮೂಗು ಮುಚ್ಚಿಕೊಳ್ಳುತ್ತೇವೆ. ಆದರೆ ಪೌರಕಾರ್ಮಿಕರು ಜೀವದ ಅಂಗ ತೊರೆದು ಕೆಲಸ ಮಾಡುತ್ತಾರೆ. ನಿಜವಾಗಲೂ ಇಂಥವರ ಪಾದಪೂಜೆ ಮಾಡಿದರೆ ತಪ್ಪಲ್ಲ ಎಂದರು.
ಕುಡಿಯುವ ನೀರು ಸೇರಿದಂತೆ ರಸ್ತೆ ಚರಂಡಿ ನಿರ್ಮಾಣದ ಅಭಿವೃದ್ಧಿಗೆ ಡಿಎಂಎಫ್ ಕೆಕೆಆರ್‌ಡಿಬಿ ಅನುದಾನ ಬಳಕೆ ಮಾಡಿಕೊಳ್ಳುವ ಯೋಜನೆ ಸೇರಿದಂತೆ ಅಮೃತ ಯೋಜನೆಯಡಿ 35 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಯೋಜನೆ ಈಗಾಗಲೇ ಟೆಂಡರ್ ಆಗಿದ್ದು. ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆಯ ಅಧ್ಯಕ್ಷ ಮರಿ ರಾಮಪ್ಪ ಮಾತನಾಡಿ ಗ್ರಾಮ ಪಂಚಾಯಿತಿಯಿಂದ ಪುರಸಭೆಯ ಮೇಲ್ದರ್ಜೆಗೆ ಸೇರಿಸುವ ಮೂಲಕ ಈ ಭಾಗದ ಬಹುಜನರ ಕನಸು ನನಸು ಮಾಡಿದ್ದು. ಮಾಜಿ ಶಾಸಕ ಹಾಗೂ ಹಾಲಿ ಕೆಎಂಎಫ್ ಅಧ್ಯಕ್ಷ ಎಸ್ ಭೀಮಾ  ನಾಯ್ಕ್ ಅವರಿಗೆ ಸಲ್ಲುತ್ತದೆ. ನೂತನವಾಗಿ ಅಧ್ಯಕ್ಷ ಮಾಡಿದ ಎಲ್ಲಾ ಸದಸ್ಯರಿಗೂ ಅಭಿನಂದನೆ ಹೇಳುತ್ತಾ ಎಲ್ಲರ ಜೊತೆ ಸೇರಿ ಪಟ್ಟಣದ ಮೂಲಭೂತ ಸೌಲಭ್ಯಗಳಿಗೆ ಕೆಲಸ ಮಾಡೋಣ. ಪೌರಕಾರ್ಮಿಕರ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಗಮನಹರಿಸಿ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷೆ ಅಂಬಿಕಾ ದೇವಿಂದ್ರಪ್ಪ, ಸದಸ್ಯರಾದ ಪವಾಡಿ ಹನುಮಂತಪ್ಪ ಜೋಗಿ ಹನುಮಂತಪ್ಪ ದೀಪಕ್ ಕಠಾರಿ, ಬಣಕಾರ ಸುರೇಶ್ ನಾಗರಾಜ್ ಜನ್ನು, ಸರಸ್ವತಿ ಗುಂಡ್ರು  ಹನುಮಂತ, ಮಂಜುಳಾ ಕೃಷ್ಣ ನಾಯ್ಕ್, ಎಚ್ ಎಂ ಚನ್ನಮ್ಮ ವಿಜಯಕುಮಾರ್ , ಮಂಗಳ ರವೀಂದ್ರ ಗೌಡ,    ರಾಜೇಶ್ ಬ್ಯಾಡಗಿ, ಆಜೀಜ್ ವುಲ್ಲಾ, ಲಂಬಾಣಿ ಗಣೇಶ್, ಕೆ ರೇಷ್ಮಾ ಭಾನು, ಕಮಲಮ್ಮ, ನೇತ್ರಾವತಿ ಹುಚ್ಚಪ್ಪ, ಅಲ್ಲಾಭಕ್ಷಿ  ನಾಮನಿರ್ದೇಶಕ ಸದಸ್ಯರಾದ ತ್ಯಾವಣಗಿ ಕೊಟ್ರೇಶ್, ಡಿಸ್ ಬಾಳಪ್ಪ, ದಾದಾಪೀರ್, ಮಂಜುನಾಥ್, ಮುಖ್ಯಾಧಿಕಾರಿ ಪ್ರಭಾಕರ್ ಪಾಟೀಲ್, ಕಂದಾಯ ಅಧಿಕಾರಿ ಮಾರಿಯಪ್ಪ ಇಂಜಿನಿಯರ್ ಹುಸೇನ್ ಭಾಷಾ, ಆರೋಗ್ಯ ಸಹಾಯಕಿ ನಾಗರತ್ನ, ವ್ಯವಸ್ಥಾಪಕ ಚಂದ್ರಶೇಖರ್ ಇದ್ದರು ಕಾರ್ಯಕ್ರಮ ನಿರ್ವಹಣೆಯನ್ನು  ಪುರಸಭೆಯ ಯೋಜನೆ ಅಧಿಕಾರಿ ಬಸವರಾಜ್ ನಿರ್ವಹಿಸಿದರು.