ಅಭಾಸಾಪ ತಾಲೂಕಾಧ್ಯಕ್ಷರಾಗಿ ಪತ್ರಕರ್ತ ಅಶೋಕ್ ಉಪ್ಪಾರ ಆಯ್ಕೆ.
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಅ.02 ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿಗೆ ಅಧ್ಯಕ್ಷರಾಗಿ ಪತ್ರಕರ್ತ ಅಶೋಕ್ ಉಪ್ಪಾರ ಆಯ್ಕೆಯಾಗಿದ್ದಾರೆಂದು ಅಭಾಸಾಪ ರಾಜ್ಯ ಸಹಕಾರ್ಯದರ್ಶಿ ಡಾ.ಶಿವಶರಣ ಗೋಡ್ರಾಲ ಪ್ರಕಟಿಸಿದ್ದಾರೆ.
ವಿಜಯನಗರ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಗಳ ಉದ್ಘಾಟನೆ ವೇಳೆ ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯ (ವಿಎನ್‍ಸಿ) ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಸಮಿತಿ ಸೇರಿದಂತೆ ತಾಲೂಕು ಸಮಿತಿಗಳ ಪದಾಧಿಕಾರಿಗಳನ್ನು ಪ್ರಕಟಿಸಿ ಪದಗ್ರಹಣ ಕಾರ್ಯಕ್ರಮ ನಡೆಸಲಾಗಿದೆ.
ಹಗರಿಬೊಮ್ಮನಹಳ್ಳಿ ತಾಲೂಕು ಸಮಿತಿ ಅಶೋಕ್ ಉಪ್ಪಾರ (ಅಧ್ಯಕ್ಷ), ಎಲ್.ಆರ್.ಶಿವಕುಮಾರ್ (ಕಾರ್ಯದರ್ಶಿ), ಸವಿತಾ ರಮೇಶ್ (ಖಜಾಂಚಿ)ಯನ್ನಾಗಿ ಜವಾಬ್ದಾರಿಯನ್ನು ವಹಿಸಲಾಗಿದೆ. ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ, ಸಾಹಿತಿ, ಸಂಸ್ಕಾರ ಭಾರತಿಯ ಪ್ರಧಾನ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಉದ್ಘಾಟಿಸಿದರು. ಮುಖ್ಯ ವಕ್ತಾರರಾಗಿ ಅಭಾಸಾಪ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಬಳ್ಳಾರಿ ಜಿಲ್ಲಾ ವಿಭಾಗದ ಸಂಯೋಜಕ ಅಶೋಕ ಕುಮಾರ ರಾಯ್ಕರ ಉಪಸ್ಥಿತರಿದ್ದರು.
ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷೆ ಡಿ.ಎನ್.ಸುಜಾತಾ ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.
One attachment • Scanned by Gmail