ಪೈಲ್ವಾನ್ ರಂಜಾನ್ ಸಾಬ್ ಪುಣ್ಯತಿಥಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.02: ಕರ್ನಾಟಕದ ಏಕೀಕರಣಕ್ಕಾಗಿ ನಗರದ ಪೈಲ್ವಾನ್ ರಂಜಾನ್ ಸಾಬ್ ಹುತಾತ್ಮರಾದ ದಿನ ಇಂದು. ಅದಕ್ಕಾಗಿ ಅಖಿಲ ಕರ್ನಾಟಕ ಜಮಾತ್ ಎ ಮನ್ಸೂರಿ, ಬಳ್ಳಾರಿ ಪಿಂಜಾರ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಮ್. ರಫಿ, ಗೌರವ ಅಧ್ಯಕ್ಷ ಅಲ್ಲಾಬಕಾಶ, ಗೆಜ್ಜೆಳ್ಳಿ ಶೇಕ್ಷಾವಲಿ,  ಯೂಸುಫ್,ಶ್ರೀ ದಸ್ತಗಿರಿ,  ಪಕ್ರರುದ್ದಿನ್,  ಜೀಲನ್, ಹಾಜಿ ಬಾಬು, ಪದಾಧಿಕಾರಿಗಳು ಹಾಗೂ ಪಿಂಜರ್ ಸಮುದಾಯದ ಹಿರಿಯರು ಯುವಕರು, ಕನ್ನಡ ಅಭಿಮಾನಿಗಳಿಂದ ನಗರದ ಸಾಂಸ್ಕೃತಿಕ ಸಮುಚ್ಚಯದಲ್ಲಿರುವ  ರಂಜಾನ್ ಸಾಬ್ ಅವರ ಪುತ್ಥಳಿಗೆ  ಪುಷ್ಪ ನಮನ ಸಲ್ಲಿಸಲಾಯ್ತು.