ಎಲ್ ಎಲ್ ಎಂ‌ನಲ್ಲಿಅಖಿಲಾಗೆ 2 ಚಿನ್ನದ ಪದಕ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.02, : ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ  ಎಲ್.ಎಲ್. ಎಂ ನಲ್ಲಿ ನಗರದ ಅಖಿಲಾ ಜಿ.ಎಂ ಅವರು 2 ಚಿನ್ನದ ಪದಕ ಮತ್ತು ಎರಡನೇ ರ‌್ಯಾಂಕ್ ಪಡೆದಿದ್ದಾರೆ.
ವಿವಿಯ 74 ನೇ ಘಟಿಕೋತ್ಸವದಲ್ಲಿ ವಿವಿಯಿಂದ ಲೇಬರ್ ಅಂಡ್ ಮ್ಯಾನೇಜ್ಮೆಂಟ್ ರಿಲೇಶನ್ಸ್ ಲಾ ವಿಷಯದಲ್ಲಿ ಪಿ.ಲಕ್ಷ್ಮೀನರಸಯ್ಯ ಚಿನ್ನದ ಪದಕ ಮತ್ತು ಕಾರ್ಪೊರೇಟ್ ಲಾ ವಿಷಯದಲ್ಲಿ ಐ. ಶರತ್ ಬಾಬು  ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಜಿಲ್ಲೆಯ ನಿವೃತ್ತ ಡಿಡಿಪಿಐ ಜಿ.ಎಂ.ವೃಷಭೇಂದ್ರಯ್ಯ ಹಾಗು ಜಿ.ಎಂ.ಮಂಗಳಗೌರಿ ಅವರ ಪುತ್ರಿ ಅಖಿಲಾ ಅವರು ಎಸ್.ಜಿ.ಶಾಪುರ ಮಠ ಅವರನ್ನು ವಿವಾಹವಾಗಿ ಧಾರವಾಡ ಹೈ ಕೋರ್ಟಿನಲ್ಲಿ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಗೋಟೂರು ಮತ್ತು ಜಾಲಿಹಾಲಕ್ ಮಠದ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.