ಮೈಸೂರು ದಸರಾದಲ್ಲಿ ಬಳ್ಳಾರಿಯ ಬಯಲಾಟ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.02: ಜಿಲ್ಲೆಯ ಕಂಪ್ಲಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್  “ವಿಶ್ವವಿಖ್ಯಾತ  ಮೈಸೂರು ದಸರಾ ಮಹೋತ್ಸವ-2024ರಲ್ಲಿ “ಬಳ್ಳಾರಿ ಜಿಲ್ಲೆಯ ಗಂಡು ಕಲೆ”ಯೆಂದು ಹೆಸರುವಾಸಿಯಾದ “ಬಯಲಾಟ” ಪ್ರದರ್ಶನ ಮಾಡಲಿದೆ.
 ಅ7 ರಂದು ಸಂಜೆ 6:30 ರಿಂದ 7:30 ರವರೆಗೆ ” ರಮಾಗೋವಿಂದ ರಂಗಮಂದಿರದ ವೇದಿಕೆಯಲ್ಲಿ ಬಯಲಾಟ ಪ್ರದರ್ಶನವಾಗಲಿದೆ.
ಗುರುಗಳಾದ ವೆಂಕಟೇಶ,ಪಾತ್ರಧಾರಿಗಳಾದ, ಬಾಲಕೃಷ್ಣ ಪಾತ್ರ ಬಿ.ಕೆ ತಿಮ್ಮರಾಜ, ಶ್ರೀ ಕೃಷ್ಣ ಬಿ ಕೆ ಸಿದ್ದಪ್ಪ ಧರ್ಮಪ್ಪ, ಮತ್ತು ಅರ್ಜುನ ಕೊಳ್ಳಿ ವಿರೇಶ ,ಸಾರಥಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟಿನ  ಕಾರ್ಯದರ್ಶಿ ಕುರುಬರ ಹೇಮೇಶ್ವರ ಪ್ರದರ್ಶನ ನೀಡಲಿದ್ದಾರೆ. ಟ್ರಸ್ಟಿನ ಅಧ್ಯಕ್ಷರು ಬಿ ಗುರು ಮಹಾಂತೇಶ ಮತ್ತು ಸರ್ವಸದ್ಯಸರು ಭಾಗವಹಿಸಲಿದ್ದಾರೆ.