ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಶ್ರೀನಿವಾಸ್
ರಾಯಚೂರು, ಆ.೨೬: ಅದ್ಬುತ ಸಂಗೀತ ಗಾಯನ ಮೂಲಕ ಈ ಭಾಗದಲ್ಲಿ ಹೆಸರುವಾಸಿಯಾದ ಶ್ರೀನಿವಾಸ್ ಆಶಾಪೂರು ಅವರಿಗೆ ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರು ಭಾನುವಾರ ವಿಜಯನಗರ ಸಾಮ್ರಾಜ್ಯದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಶ್ರೀ ಸದ್ಗುರು ಶಿವರಾಮ ಅವಧೂತರ ದಕ್ಷಿಣಕಾಶಿ ಹೇಮಕೂಟ ಹಂಪಿಯಲ್ಲಿ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ಕಲಾಮಂದಿರ ಸಾಧಕರ ಶ್ರೀ ಮಾತಾ ಪ್ರಕಾಶನ ಕರ್ನಾಟಕ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಾಹಿತ್ಯ ಸಂಗೀತ ನಾಟಕ ಜಾನಪದ ಸಮಾಜದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶ್ರೀ ಗುರು ಅಧ್ಯಾತ್ಮ ಆಶ್ರಮ ನಿರಂತರ ದಾಸೋಹ ಮತ್ತು ಪರಂಪರೆ ಆಯುರ್ವೇದಿಕ್ ಪಂಡಿತರು ಶ್ರೀ. ಪ.ಪೂ.ಡಾ.ಅವದೂತ ಮಹರ್ಷಿ ಸಿದ್ದಾರ್ಥ ಸ್ವಾಮೀಜಿ ಅವರು ಶ್ರೀನಿವಾಸ್ ಆಶಾಪೂರಿಗೆ
ಪ್ರಶಸ್ತಿ ನೀಡಿ ಗೌರವ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ವ್ಹಿ ವ್ಹಿ ಹಿರೇಮಠ, ಡಾ. ಮಲ್ಲಿಕಾರ್ಜುನ ಹಗರಿಬೊಮ್ಮನಹಳ್ಳಿ,ಎಂ,ಕಾವ್ಯಂಜಲಿ ಹೊಸಪೇಟೆ, ಚಿನ್ನು ಕೊಪ್ಪಳ, ಪುಟ್ಟರಾಜು ಜಿ. ಕೋಡಿಹಳ್ಳಿ ಅನೇಕರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.