ಮಂತ್ರಾಲಯ, ೩೫೦ ನೃತ್ಯ ಕಲಾವಿದರಿಂದ ನಾಮ ರಾಮ ನಾಮ ನೃತ್ಯ
ರಾಯಚೂರು,ಆ.೨೬: ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮಂತ್ರಾಲಯ ಹಾಗೂ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಚನ್ನರಾಯಪಟ್ಟಣ ಹಾಸನ ಇವರ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರುಗಳ ಆಶೀರ್ವಾದದೊಂದಿಗೆ ಆಗಸ್ಟ್ ೨೫ರಂದು ಭಾನುವಾರ ಸಂಜೆ ೫:೦೦ ಗಂಟೆಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಮುಂಭಾಗದಲ್ಲಿರುವ ಕಾರಿಡಾರ್ ನಲ್ಲಿ ವಿಶ್ವದಾದ್ಯಂತ ೩೫೦ಕ್ಕೂ ಹೆಚ್ಚು ನೃತ್ಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ೧೫ ನಿಮಿಷಗಳ ಕಾಲ ಶ್ರೀ ನಾಮ ರಾಮ ನಾಮ ಗೀತಗ ಪಕ್ಕ ವಾದ್ಯದೊಂದಿಗೆ ಏಕಕಾಲದಲ್ಲಿ ನೃತ್ಯ ಮಾಡುವ ಮೂಲಕ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಅಕಾಡೆಮಿ ಮತ್ತು ಮಕ್ಕಳು ಹಾಗೂ ಮಠದ ಹೆಸರನ್ನು ಸೇರಿಸುವ ಹಿನ್ನೆಲೆಯಲ್ಲಿ ಜಪಾನ್ ಜರ್ಮನ್ ಇಂಡೋನೇಷಿಯಾ ಸೇರಿದಂತೆ ಭಾರತ ದೇಶದ ಹಲವಾರು ಭಾಗಗಳಿಂದ ಆಗಮಿಸುತ್ತಿರುವ ವೃಕ್ಷ ಕಲಾವಿದರಿಗೆ ರಾಯರ ದರ್ಶನ ಮಾಡಿಸುವ ಮೂಲಕ ಏನ್ ದೃಶ್ಯ ಸಂಭ್ರಮವನ್ನು ರಾಯರ ಪಾದದಲ್ಲಿ ಸಮರ್ಪಣೆ ಮಾಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದುತ್ಯೋತ್ಸವ ಕಾರ್ಯಕ್ರಮವನ್ನು ಈ ದಿನ ಸಂಜೆ ೫:೦೦ ಗಂಟೆಗೆ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ.ಸುಭುದೇಂದ್ರ ತೀರ್ಥ ಇದು ಶ್ರೀಪಾದಂಗಳವರು ಉದ್ಘಾಟನೆ ಮಾಡಿದರು.
ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಮುಖ್ಯ ವ್ಯವಸ್ಥಾಪಕರಾದ ಅರವಿಂದರ್ ಸಿಂಗ್ ಹಾಗೂ ಪಕ್ಕ ವಾದ್ಯದಲ್ಲಿ ಶ್ರೀಮತಿ ಅಕ್ಷತಾ, ಶಶಿಕಲ, ಭಾಗ್ಯಲಕ್ಷ್ಮೀ, ಭಾರತಿ ಬಾಬು ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಡಾ. ಸ್ವಾತಿ ಪಿ ಭಾರದ್ವಾಜ್ ತಿಳಿಸಿದ್ದಾರೆ.