ಆಧುನಿಕ ನಾಗರಿಜತೆಗೆ ಜಾನಪದ ಬುನಾದಿ: ಗೋ.ರು.ಚ
ಬೀದರ್: ಆ.26:ಆಧುನಿಕ ನಾಗರಿಕತೆಗೆ ಜಾನಪದ ಸಂಸ್ಕøತಿ ಭದ್ರ ಬುನಾದಿಯಾಗಿದೆ. ನಾಗರಿಕ ಸಮಾಜ ಎಷ್ಟೇ ಮುಂದುವರೆದರೂ ಜನಪದ ಪದ್ಧತಿ ವ್ಯಕ್ತಿಯ ಜೀವನದಲ್ಲಿ ಅತ್ಯವಶ್ಯಕವಾಗಿದೆ ಎಂದು ಸಂಸ್ಕೃತಿ ಚಿಂತಕ ಗೋ.ರು. ಚನ್ನಬಸಪ್ಪ ತಿಳಿಸಿದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಹಾಗೂ ಸಂಶೋಧನಾ ಕೇಂದ್ರ ಮತ್ತು ಬಿ.ವ್ಹಿ.ಭೂಮರೆಡ್ಡಿ ಕಲಾಏಜಿನ ಸಹಯೋಗದಲ್ಲಿ ಬಿ.ವಿ.ಬಿ. ಕಾಲೇಜಿನ ಸಭಾಂಗಣದಲ್ಲಿ ಜರುಗಿದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಪದ ಪರಂಪರೆ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಹೀಗಾಗಿ ಜನಪದ ಸಂಸ್ಕೃತಿ, ಕಲೆ ಸಾಹಿತ್ಯವನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂಬ ಕುರಿತು ಚಿಂತನ ಮಂಥನ ನಡೆಯುವ ಅವಶ್ಯಕತೆ ಇದೆ. ಜನಪದ ಸಾಹಿತ್ಯ ಹೃದಯವಿದ್ದಂತೆ, ಶಿಷ್ಟ ಸಾಹಿತ್ಯ ತಲೆ ಇದ್ದಂತೆ. ಜನಪದ ಸಾಹಿತ್ಯ ಎಲ್ಲರ ಜ್ಞಾನಕ್ಕೆ ನಿಲುಕುತ್ತದೆ. ಆದರೆ ಶಿಷ್ಟ ಸಾಹಿತ್ಯ ನಿಲುಕುವುದಿಲ್ಲ. ಮನೆದೀಪವಾಗಿರುವ ಜನಪದ ಕಲೆ, ಜೀವನ ಉಳಿಸುವ ಅವಶ್ಯಕತೆ ಇದೆ ಎಂದು ಗೋ.ರು.ಚ. ತಿಳಿಸಿದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪೆÇ್ರ. ಜಗನ್ನಾಥ ಹೆಬ್ಬಾಳೆ ಮಾತನಾಡಿ ವ್ಯಕ್ತಿ ಆರೋಗ್ಯದಿಂದ ಬದುಕಲು ಜಾನಪದ ಊಟೋಪಚಾರ, ಉಡುಗೆ-ತೊಡುಗೆ ಅಳವಡಿಸಿಕೊಳ್ಳಬೇಕು. ಜಾನಪದ ಸಂಸ್ಕೃತಿ ಆಚರಣೆಯಿಂದ ಮನಸಿಗೆ ಶಾಂತಿ ಲಭಿಸುತ್ತದೆ. ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆ ಬೆಳೆದು ಸಮಾಜ ಸಮೃದ್ಧಿಯಿಂದ ಸಾಗುತ್ತದೆ ಎಂದು ಪ್ರತಿಪಾದಿಸಿದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ ಪರಕೀಯರು ಭಾರತವನ್ನು ಹಾಳು ಮಾಡಲು ಈ ದೇಶದ ಜಾನಪದ ಸಂಸ್ಕೃತಿ ಹಾಳು ಮಾಡಬೇಕೆಂದು ಇಲ್ಲಿಯ ಗುರುಕುಲ ಪದ್ಧತಿ, ಸ್ವಾಭಿಮಾನ, ಸ್ವಾಯತ್ತತೆ ಮತ್ತು ಶ್ರೀಮಂತ ಸಂಸ್ಕೃತಿ ಕೆಡಿಸಿದರು. ಆದರೂ ಜನರ ಹೃದಯದಲ್ಲಿ ಜಾನಪದ ಸಂಸ್ಕೃತಿ ಇಂದಿಗೂ ಗಟ್ಟಿಯಾಗಿ ನಿಂತಿದೆ. ಯುವಕರು ಜಾನಪದವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ತಾಯಂದಿರಿಗೆ ಜಾನಪದ ಬಗ್ಗೆ ಸಾಕಷ್ಟು ಗೊತ್ತಿದೆ. ಅಡುಗೆ ಮನೆ ದವಾಖಾನೆ ಇದ್ದಂತೆ. ಆದರೆ ಇಂದು ಅದನ್ನು ಮರೆತು ಆಸ್ಪತ್ರೆಗೆ ಅಲೆದಾಡುತಿದ್ದೇವೆ. ಮಹಿಳೆಯರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಜಾನಪದ ಸಂಸ್ಕೃತಿ ಕುರಿತು ಮಕ್ಕಳಲ್ಲಿ ಬಿತ್ತಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಹೈ.ಕ. ಶಿಕ್ಷಣ ಸಂಸ್ಥೆಯ ಆಡಳಿ ಮಂಡಳಿ ಸದಸ್ಯ ಡಾ. ರಜನೀಶ ವಾಲಿ ವಹಿಸಿದ್ದರು. ವೇದಿಕೆ ಮೇಲೆ ಸಾಹಿತಿ ರುದ್ರಯ್ಯ, ಬಿ.ವ್ಹಿ. ಭೀಮರೆಡ್ಡಿ ಕಾಲೇಜಿನ ಪ್ರಾಚಾರ್ಯರಾದ ಡಾ. ಪಿ.ವಿಠಲರೆಡ್ಡಿ, ಕೇಂದ್ರದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಉಪಸ್ಥಿತರಿದ್ದರು.
ಜಾನಪದ ಗಾಯಕ ಎಸ್.ಬಿ.ಕುಚಬಾಳ ಅವರು ಜಾನಪದ ಹಾಡುಗಾರಿಕೆಯನ್ನು ನಡೆಸಿಕೊಟ್ಟರು.