ಕೃಷ್ಣ ಜನ್ಮಾಷ್ಠಮಿ ಭಾರತದ ಸಂಸ್ಕೃತಿ
ರಾಯಚೂರು.ಆ೨೬: ಉದಯನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ವಿದ್ಯಾಲಯದ ರಾಜಯೋಗಿನಿ ಸ್ಮೀತಾ ಅಕ್ಕನವರ ಅಧ್ಯಕ್ಷತೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಹಮ್ಮಿಕೊಳ್ಳಲಾಗಿತ್ತು.
ರಾಜಯೋಗಿನಿ ಸ್ಮೀತಾ ಅಕ್ಕನವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂದೇಶ ನೀಡಿದ ಅವರು ಕೃಷ್ಣ ಜನ್ಮಾಷ್ಠಮಿಯು ನಮ್ಮ ನವ ಭಾರತದ ಸಂಸ್ಕೃತಿಯಾಗಿದೆ. ಭಗವಂತನ ಸ್ವರೂಪರಾದ ಚಿಕ್ಕ ಚಿಕ್ಕ ಮಕ್ಕಳು ಶ್ರೀಕೃಷ್ಣನ ವೇಷ, ಆಭರಣಗಳನ್ನು ಧರಿಸಿ ನೃತ್ಯಗೈದಿರುವುದು ಒಂದು ಸುಂದರವಾದ ಕ್ಷಣಗಳನ್ನು ನಮ್ಮೆಲ್ಲ ಕಣ್ಣಿನಿಂದ ವೀಕ್ಷಿಸುವುದೇ ಒಂದು ಸಂಭಮವಾಗಿದೆ. ನಮ್ಮ ದೇಶದಲ್ಲಿ ವರ್ಷವೀಡಿ ಹಬ್ಬ ಹರಿದಿನಗಳು ಇರುತ್ತವೆ. ಅದಕ್ಕಾಗಿಯೇ ನಮ್ಮ ದೇಶವನ್ನು ಭರತ ದೇಶವೆಂದು ಕರೆಯಲಾಗುತ್ತದೆ. ಶ್ರೀ ಕೃಷ್ಣನೆಂದರೆ ಸತ್ಯ, ಸುಂದರ, ಶಾಂತಿ ಮತ್ತು ಸಂಸ್ಕಾರವಿದ್ದಂತೆ ಎಂದು ನುಡಿಯುತ್ತ ಸರ್ವರಿಗೂ ಕೃಷ್ಣ ಜನ್ಮಾಷ್ಠಮಿಯ ಹಾರ್ಧಿಕ ಶುಭಾಶಯಗಳನ್ನು ತಿಳಿಸಿದರು.
ಕೃಷ್ಣನ ವೇಶ ಧರಿಸಿದ ಚಿಕ್ಕ ಚಿಕ್ಕ ಮಕ್ಕಳು ಶ್ರೀಕೃಷ್ಣನ ಹಾಡಿಗೆ ನೃತ್ಯವನ್ನು ಪ್ರದರ್ಶನ ಮಾಡಿದರು. ನಂತರ ಅವರಿಗೆ ಅಕ್ಕನವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ವಿದ್ಯಾಲಯದ ಕಾರ್ಯದರ್ಶಿ ಬಿ.ಕೆ. ಶಾರದಾ ಅಕ್ಕ, ಪ್ರೀಯಾ ಹತ್ತಿಕಾಳು, ಪ್ರಭಾ, ಶೈನಾಜ್, ಬೇಗಂ, ಜಗದೀಶ, ಎಸ್.ಕುಮಾರ, ಕೇಶವರೆಡ್ಡಿ, ರಾಜಶೇಖರ ಹಾಗೂ ವಿಶ್ವ ವಿದ್ಯಾಲಯದ ಸರ್ವ ಪರಿವಾರದವರು ಇದ್ದರು.