ಶಿವಯೋಗಮಂದಿರಕ್ಕೆ ಭಕ್ತರ ಪಾದಯಾತ್ರೆ
ಬಾದಾಮಿ,ಆ26: ಶಿವಯೋಗಮಂದಿರದ ಸಂಸ್ಥೆಯ ಬಾದಾಮಿ ಶಾಖಾಮಠದ ಸೇವಾ ಬಳಗದ ವತಿಯಿಂದ ರವಿವಾರ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದು, ಬನಶಂಕರಿ ಮಾರ್ಗವಾಗಿ ಶಿವಯೋಗಮಂದಿರ ತಲುಪಿದರು.
ನಂತರ ಶಿವಯೋಗಮಂದಿರವನ್ನು ತಲುಪಿ, ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ಹಾಗೂ ಸದಾಶಿವ ಮಹಾಸ್ವಾಮಿಗಳ ಗದ್ದುಗೆಯ ದರ್ಶನವನ್ನು ಪಡೆದು ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಶ್ರೀಗಳು, ಇಲಕಲ್ ನಗರದ ಪ್ರವಚನಕಾರರಾದ ಅನ್ನದಾನ ಶಾಸ್ತ್ರೀಗಳು, ಒಪ್ಪತ್ತೇಶ್ವರ ಶ್ರೀಗಳು, ಸಿದ್ದನಕೊಳ್ಳದ ಗುರುಸಿದ್ದ ಸ್ವಾಮೀಜಿಗಳು, ಶಾಖಾ ಬಳಗದ ಸದಸ್ಯರು, ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.