ಲಿಂಗಧೀಕ್ಷೆ ಜಂಗಮ ವಟುಗಳಿಗೆ ಮೊದಲ ಮದುವೆ
ರಾಯಚೂರು.ಆ೨೬: ನಗರದ ಕಿಲ್ಲೇಬೃಹನ್ಮಠದಲ್ಲಿ ಶುಭ ಶ್ರಾವಣ ಮಾಸದ ಪ್ರಯುಕ್ತ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜಂಗಮ ವಟುಗಳಿಗೆ ಲಿಂಗಧೀಕ್ಷೆ, ಮಂತ್ರಧೀಕ್ಷೆ, ಅಯ್ಯಾಚಾರ, ಹಿರಿಯರಿಗೆ ಶಿವಧೀಕ್ಷೆ ಹಾಗೂ ಚಿಕ್ಕ ಮಗುವಿಗೆ ಅಕ್ಷರಭ್ಯಾಸ ಧಿಕ್ಷೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಜಂಗಮ ವಟುಗಳ ಶಿರದ ಮೇಲೆ ಪಂಚಾಮೃತ ಅಭಿಷೇಕ, ಜಲಾಭಿಷೇಕ ಮಾಡಿ ಅವರಿಗೆ ಪಾಲಕರು ಹೊಸ ವಸ್ತ್ರಗಳನ್ನ ನೀಡಿದ ನಂತರ ಶ್ರೀಮಠದ ಶರಣಯ್ಯ ಸ್ವಾಮಿ ಜಾಗೀರವೆಂಕಟಾಪೂರರವರ ಪುರೋಹಿತ ತಂಡದಿಂದ ವಟುಗಳಿಗೆ ಭಸ್ಮಧಾರಣೆ ಮಾಡಿ ಅವರ ಶಿರದ ಮೇಲೆ ಪತ್ರಿ ಪುಷ್ಪಗಳನ್ನು ಧಾರಣೆ ಮಾಡಿ ಅವರಿಗೆ ಆರತಿ ಬೆಳಗಿ ಅವರನ್ನು ಲಿಂಗಧೀಕ್ಷೆ, ಮಂತ್ರಧೀಕ್ಷೆ ಪಡೆಯಲು ಸಿದ್ದಗೊಳಿಸಿದ ನಂತರ ವಟುಗಳಿಂದಲೇ ಇಷ್ಠಲಿಂಗಳಿಗೆ ರುದ್ರಾಭಿಷೇಕ ಪೂಜೆ ಸಲ್ಲಿಸಿದ ನಂತರ ಶ್ರೀಮಠದ ಪೀಠಾಧಿಪತಿಗಳು ಜಂಗಮ ವಟುಗಳ ಇಷ್ಠಲಿಂಗಳನ್ನು ಧಾರಣೆ ಮಾಡಿ ನಂತರ ಅವರಿಗೆ ಕರ್ಣ ಪ್ರಸಾದ ನೀಡಿ ವಟುಗಳಿಗೆ ತಮ್ಮ ಅಮೃತವಾಣಿಯಿಂದ ಪ್ರಣವ ಪಂಚಾಕ್ಷರಿ ಮಹಾ ಮಂತ್ರವನ್ನು ಭೋದಿಸಿದರು. ಸುಮಾರು ಹದಿನೈದರಿಂದ ಇಪ್ಪತ್ತು ಜನ ಜಂಗಮ ವಟುಗಳಿಗೆ ಲಿಂಗಧೀಕ್ಷೆ, ಮಂತ್ರಧೀಕ್ಷೆ ಅಯ್ಯಾಚಾರಗಳು ನೆರವೇರಿದವು. ವೃದ್ಧರಿಬ್ಬರೂ ಸಹಿತ ಶ್ರೀಗಳಿಂದ ಶಿವಧೀಕ್ಷೇ ಪಡೆದರು ನಂತರ ಒಂದು ಚಿಕ್ಕ ಮಗುವಿಗೆ ಮಗುವಿನ ದಂಪತಿಗಳ ಸಮ್ಮುಖದಲ್ಲಿ ಅಕ್ಷರಭ್ಯಾಸ ಪೂಜೆಯನ್ನು ನೆರವೇರಿಸಿದರು.
ನಂತರ ಧರ್ಮ ಸಂದೇಶ ನೀಡಿದ ಶ್ರೀಮಠದ ಶ್ರೀಗಳು ನಮ್ಮ ವೀರಶೈವ ಲಿಂಗಾಯತ ಧರ್ಮದಲ್ಲಿ ಜಂಗಮ ವಟುಗಳಿಗೆ ಜೀವನದಲ್ಲಿ ಮೊಟ್ಟ ಮೊದಲ ಮುದುವೆಯಂದರೆ ಲಿಂಗಧೀಕ್ಷೆ, ಮಂತ್ರಧೀಕ್ಷೆ ಮತ್ತು ಅಯ್ಯಾಚಾರವಾಗಿರುತ್ತದೆ. ಸರ್ವ ವಟುಗಳು ಇಂದು ಲಿಂಗಧಿಕ್ಷೇಯನ್ನು ಪಡೆದು ಇಸ್ಟು ದಿವಸಗಳು ಮಾಂಸಪಿಂಡದಿಂದ ಇದ್ದಂತ ನೀವು ಇಂದು ಪವಿತ್ರವಾದ ಮಂತ್ರಪಿಂಡದ ಜಂಗಮರಾಗಿದ್ದೀರಾ ಇಂದಿನಿಂದ ನೀವು ಸಹಿತ ನಿಮ್ಮ ಶಿಷ್ಯಂದಿರ ಮನೆಗಳಲ್ಲಿ ದೀಪಾವಳಿ ಹಾಗೂ ಇನ್ನಿತರ ಸಂದರ್ಭದಲ್ಲಿ ಗದ್ದುಗೆ ಪೂಜೆ ಮಾಡಲು ಮತ್ತು ಗದ್ದುಗೆಯ ಮೇಲೆ ಆಶೀನರಾಗಲು ಯೋಗ್ಯರಾಗಿದ್ದೀರಾ. ಹಾಗೆ ನಿಮ್ಮ ಮನೆಗೆ ತೆರಳಿದ ಮೇಲೆ ನಿಮ್ಮ ಕುಟುಂಬದ ಅನುಕೂಲದಂತೆ ಮೂರು ದಿನದಲ್ಲಿ, ಐದು ದಿನದಲ್ಲಿ, ಒಂಬತ್ತು ದಿನದಲ್ಲಿ ಆಥವಾ ಹನ್ನೊಂದು ದಿನದಲ್ಲಿ ನಿಮ್ಮ ಬಂಧುಗಳ ಅನುಕೂಲ ತಕ್ಕಂತೆ ಬಂಧು ಬಳಗದವರನ್ನು ಕರೆದು ಲಿಂಗ ಧೀಕ್ಷೆ ಪಡೆದ ವಟುಗಳಿಗೆ ಮನೆಯ ಮುಂದೆ ನೀರೆರೆದು ಮದುವೆಯಾದಂಥ ವಧು ವರರಿಗೆ ಹೇಗೆ ವಾರದ ನೀರನ್ನು ಹಾಕುತ್ತೀರೋ ಅದೇ ಥರ ಜಂಗಮ ವಟುಗಳೂ ಸಹಿತ ಮದು ಮಕ್ಕಳಿದ್ದಂತೆ ಇವರಿಗೂ ಕೂಡ ವಾರದ ನೀರನ್ನು ಹಾಕಿ ಕಾರ್ಯಕ್ರಮ ಮಾಡಿ ಎಂದು ನುಡಿದರು.
ಜಂಗಮ ವಟುಗಳು ನಿತ್ಯವೂ ನಿಮ್ಮ ಮನೆಯಲ್ಲಿ ಇಷ್ಠಲಿಂಗ ಪೂಜೆಯನ್ನು ಮಾಡಿಕೊಳ್ಳಬೇಕು, ಹಾಗೆ ಮನೆಯಲ್ಲಿದ್ದಂತ ಪಾಲಕರು ಮತ್ತು ಹಿರಿಯರು ನಿತ್ಯವೂ ಲಿಂಗಪೂಜೆ ಮಾಡಿಕೊಳ್ಳುವವರಿದ್ದರೆ ನಿಮ್ಮನ್ನು ನೋಡಿ ನಿಮ್ಮ ಮಕ್ಕಳೂ ಸಹಿತ ಇ಼ಷ್ಠಲಿಂಗ ಪೂಜಾನಿಷ್ಠರಾಗುತ್ತಾರೆ ಆದಕಾರಣ ಪಾಲಕರು ನಿತ್ಯವೂ ಇಷ್ಠಲಿಂಗ ಪೂಜಾ ನಿಷ್ಠರಾದರೆ ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ಮತ್ತು ಅವರ ಜೀವನದಲ್ಲಿ ಒಳ್ಳೇ ಭವಿಷ್ಯ ಹೊಂದುತ್ತಾರೆ ಎಂದು ನುಡಿದರು.
ರೇಣುಕಾರಾಧ್ಯಯ್ಯ ಸ್ವಾಮಿ, ಶ್ರೀನಾಥ ಸ್ವಾಮಿ, ಮಂಜುನಾಥ ಸ್ವಾಮಿ, ಸಂಗಯ್ಯ ಸ್ವಾಮಿ, ಉಮೇಶ ಸ್ವಾಮಿ, ಮಹೇಶ ಸ್ವಾಮಿ, ಸೋಮೇಶ್ವರ ಸ್ವಾಮಿ, ಶ್ರೀಮಠದ ಪುರೋಹಿತ ವೃಂಧ, ಜಂಗಮ ವಟುಗಳ ಪಾಲಕರು, ಯುವಕ ಯುವತಿಯರು ಸದ್ಭಕ್ತರು ಇದ್ದರು.