ಮಕ್ಕಳಿಗೆ ಕೃಷ್ಣ -ರಾಧೆ ವೇಷ ಧರಿಸಿ ಖುಷಿಪಟ್ಟ ಪಾಲಕರು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ. 26 :- ಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ಮಕ್ಕಳಿಗೆ ಕೃಷ್ಣ -ರಾಧೆಯರ ವೇಷ ಧರಿಸಿ ಫೋಟೋ ಕ್ಲಿಕ್ಕಿಸಿ ಅವರ ತೊದಲು ನುಡಿ, ನಡೆ ನಗುವಿನ ಸಂಭ್ರಮದಲ್ಲಿ ವೇಷಧಾರಿ ಮಕ್ಕಳ ತಂದೆ ತಾಯಿ ಪಾಲ್ಗೊಂಡರು.
ಪಟ್ಟಣದ ಪೊಲೀಸ್ ಇಲಾಖೆ ಅಂಜಿನಪ್ಪ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗಿರಿಜಾ ದಂಪತಿ ಏಕೈಕ  ಪುತ್ರಿ ಜಾಹ್ನವಿ ರಾಧೆ ವೇಷಧಾರಿಯಾಗಿದ್ದು, ಅದೇ ರೀತಿ ಕಾವಲ್ಲಿ ಮನೆತನದ ಸುನೀತಾ ಪೊಲೀಸ ಇಲಾಖೆ ಸಿಬ್ಬಂದಿ ಕಾಂತರಾಜ್ ಅವರ ಇಬ್ಬರು ಮಕ್ಕಳಾದ ವಿಹಾನ್ ಸಾಯಿಸೂರ್ಯ ಹಾಗೂ ಅಭಿಜ್ಞಾ ಇವರುಗಳಿಗೆ ಕೃಷ್ಣ -ರಾಧೆ ವೇಷಧರಿಸಿದ್ದು ಮತ್ತು ಪಟ್ಟಣದ ವಾಲಿಬಾಲ್ ಕ್ರೀಡಾಪಟು ವಾಲಿಬಾಲ್ ವೆಂಕಟೇಶ ಹಾಗೂ ಅಂಗನವಾಡಿ ಕಾರ್ಯಕರ್ತೆ ಸುಜಾತ ದಂಪತಿ ಪುತ್ರಿ ವಿಭಾ ಅವಳಿಗೆ ರಾಧೆ ವೇಷಧರಿಸಿದ್ದು ಮಕ್ಕಳ ಮುದ್ದಾದ ನಗೆ ಆ ಉಡುಪಿನಲ್ಲಿ ಕಾಣುವ ಅಂದದ ಬಗ್ಗೆ ಮಕ್ಕಳ ಪಾಲಕ ಪೋಷಕರ ಖುಷಿಗೆ ಪಾರವೇ ಇರಲಿಲ್ಲ.