ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಬೇಡ
ಬೀದರ್:ಆ.26: ಕ್ರೀಡೆ ಹಾಗೂ ಸ್ಪರ್ಧೆಗಳಲ್ಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಹಿಂಜರಿಯಬಾರದು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ ಹೇಳಿದರು.
ನಗರದ ಜನಸೇವಾ ಶಾಲೆಯಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕøತಿ ಉತ್ಸವ ಪ್ರಯುಕ್ತ ಶನಿವಾರ ನಡೆದ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೋಲು-ಗೆಲುವು ಸಾಮಾನ್ಯ. ಕಾರಣ, ಯಾವುದೇ ಭಯ ಇಲ್ಲದೆ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಪಡಿಸಬೇಕು ಎಂದು ತಿಳಿಸಿದರು.
ಸ್ಪರ್ಧೆಗಳು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಲಿವೆ. ಮಕ್ಕಳ ಜ್ಞಾನ ವೃದ್ಧಿಗೂ ಸಹಕಾರಿ ಆಗಲಿವೆ ಎಂದು ಹೇಳಿದರು.
ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸಲು ಹಾಗೂ ಈ ಭಾಗದ ದೇಸಿ ಕಲೆಗಳಿಗೆ ಉತ್ತೇಜನ ನೀಡಲು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.
ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 22 ರಂದು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಮಟ್ಟದ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು.
ಜನಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ವಿಭಾಗ ಸಂಪನ್ಮೂಲ ವ್ಯಕ್ತಿಗಳಾದ ದೇವಿಪ್ರಸಾದ್ ಕಲಾಲ್, ಮಹಮ್ಮದ್ ರಫಿ, ವಿಕಾಸ ಅಕಾಡೆಮಿಯ ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಂಚಾಲಕರಾದ ಅಕ್ಷಯ್ ಮುದ್ದಾ, ಗುರುನಾಥ ವಟಗೆ, ಯಶವಂತರಾವ್ ಬಿರಾದಾರ, ಗುಂಡಯ್ಯ ತೀರ್ಥ, ಸಂಗಮೇಶ ಜವಾದಿ, ಲೋಕೇಶ ಮೋಳಕೇರೆ, ಸಹ ಸಂಚಾಲಕರಾದ ಪ್ರಶಾಂತ ಶಿಂಧೆ, ಗಣಪತಿ ಹಡಪದ ಇದ್ದರು.
ವಿಕಾಸ ಅಕಾಡೆಮಿಯ ಜಿಲ್ಲಾ ಸಹ ಸಂಚಾಲಕ ರೇವಣಸಿದ್ದ ಜಾಡರ್ ನಿರೂಪಿಸಿದರು. ಮತ್ತೊಬ್ಬರು ಸಹ ಸಂಚಾಲಕ ಬಸವರಾಜ ಅಷ್ಟಗಿ ಸ್ವಾಗತಿಸಿದರು. ಬೀದರ್ ತಾಲ್ಲೂಕು ಸಂಚಾಲಕ ಕಾಮಶೆಟ್ಟಿ ಚಿಕ್ಕಬಸೆ ವಂದಿಸಿದರು.
ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ 14 ಸ್ಪರ್ಧೆಗಳಲ್ಲಿ ಜಿಲ್ಲೆಯ ಎಂಟು ತಾಲ್ಲೂಕುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ವಿವಿಧ ಸ್ಪರ್ಧೆಗಳ ವಿಜೇತರು
ಶಿಶು ಮಂದಿರ ವಿಭಾಗ:
ಕತೆ ಹೇಳುವುದು: ಶ್ರಾವ್ಯ ಸಂಗಮೇಶ (ಪ್ರಥಮ).
ಪ್ರಾಥಮಿಕ ವಿಭಾಗ:
ಚಿತ್ರಕಲೆ: ಸಾಕ್ಷಿ ಸಂಗಪ್ಪ (ಪ್ರಥಮ).
ಭಾಷಣ: ವೈಷ್ಣವಿ ದೀಪಕ್ (ಪ್ರಥಮ).
ಪ್ರೌಢಶಾಲಾ ವಿಭಾಗ:
ಶಾಸ್ತ್ರೀಯ ನೃತ್ಯ: ಪ್ರಿಯಾಂಕಾ ಸಂಜುಕುಮಾರ (ಪ್ರಥಮ).
ರಂಗೋಲಿ: ಸಾಕ್ಷಿ ಹುಮನಾಬಾದ್ (ಪ್ರಥಮ).
ಹಜ್ಜ ಜಿಗಿದಾಟ: ವಿಜಯಲಕ್ಷ್ಮಿ ಸಂಗಮೇಶ (ಪ್ರಥಮ).
ಸೂರ್ಯ ನಮಸ್ಕಾರ: ಅಮರ ನಾಗನಾಥ (ಪ್ರಥಮ).
ಚಿತ್ರಕಲೆ: ಪ್ರಜ್ವಲ್ ದೀಪಕ್ (ಪ್ರಥಮ).
ಭಾಷಣ: ಅನುಜಾ ನಂದಕುಮಾರ (ಪ್ರಥಮ).
ರಸಪ್ರಶ್ನೆ (ಸಾಮಾನ್ಯ ಜ್ಞಾನ): ಕೇದಾರ್ ಸೋಮಶೇಖರ, ಕೇದಾರಲಿಂಗ ಗಂಗಾಧರ (ಪ್ರಥಮ).
ರಸಪ್ರಶ್ನೆ(ಸಾಮಾನ್ಯ ವಿಜ್ಞಾನ-ತಂತ್ರಜ್ಞಾನ): ರಹೀಂ, ರೋಹನ್ (ಪ್ರಥಮ).
ಸಮೂಹ ಗಾಯನ: ಶ್ರೇಯಾ, ಸ್ನೇಹಾ, ದೀಪಿಕಾ, ಶ್ರಾವಣಿ, ಸಾಕ್ಷಿ (ಪ್ರಥಮ).
ಗುಂಪು ಸ್ಪರ್ಧೆ:
ಬಾಲಕಿಯರ ವಿಭಾಗದ ಭಜನೆ: ಬೀದರನ ದತ್ತಗಿರಿ ಶಾಲೆಯ ಶ್ರೀನಿಧಿ ಮತ್ತು ತಂಡ (ಪ್ರಥಮ).
ಬಾಲಕರ ವಿಭಾಗದ ಭಜನೆ: ಬೀದರನ ರವೀಂದ್ರ ಶಾಲೆಯ ತಂಡ (ಪ್ರಥಮ).
ಬಾಲಕಿಯರ ವಿಭಾಗದ ಕೋಲಾಟ:
ಬೀದ???ನ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ ತಂಡ (ಪ್ರಥಮ).
ಬಾಲಕರ ವಿಭಾಗದ ಕೋಲಾಟ: ಕಮಲನಗರ ತಾಲ್ಲೂಕಿನ ಮುಧೋಳದ ತುಕಾರಾಮ ಚಬ್ಬೆ ಮತ್ತು ತಂಡ (ಪ್ರಥಮ).