ಕರ್ನಾಟಕದ ಸಂಸ್ಕøತಿಯ ಅಸ್ಮಿತೆ
ಧಾರವಾಡ, ಆ26: ಕನ್ನಡದ ನಮ್ಮ ಹಿರಿಯರು ಕನ್ನಡ ನೆಲ ಹೇಗಿರಬೇಕು? ಅದರ ಸಂಸ್ಕøತಿ ಹೇಗಿರಬೇಕೆಂದು? ಬಾಳಿ ಬದುಕಿ ನಾಡು ಕಟ್ಟಿಕೊಟ್ಟು ಹೋಗಿದ್ದಾರೆ ಎಂದು ಚಿಂತಕ ಪ್ರೊ. ಶಶಿಧರ ತೋಡಕರ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಎಲ್ಲ ಕನ್ನಡ ಸಂಘಗಳ ಸಹಯೋಗದಲ್ಲಿ ಆಂಧ್ರಪ್ರದೇಶದ ಆದವಾನಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9ನೇ ಮಹಾಮೇಳದ 2ನೇ ಗೋಷ್ಠಿಯಲ್ಲಿ ಕರ್ನಾಟಕ ಸಂಸ್ಕøತಿಯ ಅಸ್ಮಿತೆ' ಕುರಿತು ವಿಷಯ ಮಂಡನೆ ಮಾಡುತ್ತಾ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ಕವಿರಾಜ ಮಾರ್ಗವು ಕನ್ನಡಿಗರಿಗೆ ಸಹನೆ ಮತ್ತು ಸಮರ್ಪಣೆ ಮನೋಭಾವನೆ ಕಟ್ಟಿಕೊಟ್ಟ ಗ್ರಂಥ. ಇನ್ನೊಬ್ಬರ ಮಾತುಗಳನ್ನು ಕೇಳುವ ಗುಣ ಕನ್ನಡಿರ ವೈಶಿಷ್ಟ್ಯ. ಪರಧರ್ಮವನ್ನು ಗೌರವಿಸಬೇಕು. ಹಾಗಾಗಿ ಕರ್ನಾಟಕಕ್ಕೆ ಬಂದ ಎಲ್ಲ ಧರ್ಮಗಳನ್ನು ತಮ್ಮ ಧರ್ಮಗಳಂತೆ ಸ್ವೀಕರಿಸಿ, ಅವುಗಳ ಜೊತೆ ಹೊಕ್ಕು ಬಳಿಕೆ ಮಾಡುತ್ತಿದ್ದಾರೆ. ಕನ್ನಡಿಗರು ಎಂದೂ ಅವುಗಳು ಪರಧರ್ಮಗಳು ಎಂದು ಭಾವಿಸಲಿಲ್ಲ. ಕವಿರಾಜ ಮಾರ್ಗದ ಮತ್ತೊಂದು ವಿಶೇಷತೆ ಎಂದರೆ ಬ್ರಹ್ಮಾಂಡದಲ್ಲಿ ಭೂಮಿ ಎಂಬುದೊಂದಿದೆ. ಅದರಲ್ಲಿ ಭಾರತ ಎನ್ನವುದೊಂದಿದೆ. ಅದರಲ್ಲಿ ಕರ್ನಾಟಕ ಎನ್ನುವ ರಾಜ್ಯವಿದೆ. ಅವು ಒಂದುಕ್ಕೊಂದು ಸಮರಸವಾಗಿ ಬೆರೆತಿವೆ. ಹಾಗೆ ಬೆರೆತರೂ ಕೂಡ ತಮ್ಮ ಜನಗಳನ್ನು ಉಳಿಸಿಕೊಂಡಿದೆ ಎಂಬ ದೃಷ್ಟಿಕೋನದಿಂದಲೇ ಕುವೆಂಪುರವರು ಭಾರತ ಜನನೀಯ ತನುಜಾತೆ ಜಯಹೇ ಕರ್ನಾಟಕ ಮಾತೆ ಅನ್ನುವ ನಾಡಗೀತೆಯನ್ನು ರಚಿಸಲು ಸಾಧ್ಯವಾಯಿತು.
ಕನ್ನಡಿಗರು ಬರೀ ನಮ್ಮತನವನ್ನೇ ಹೇಳಿಕೊಳ್ಳುವಂತವರಲ್ಲಿ ನಮ್ಮೊಳಗೆ ಇಡೀ ಜಗತ್ತನ್ನು ಒಳಗು ಮಾಡಿಕೊಂಡು ಈ ನೆಲದ ಮೂಲಕವೇ ಜಗತ್ತನ್ನು ಕಾಣುವಂತವರು ಮತ್ತು ಕಲಿಸುವಂತವರು ಎಂಬುದನ್ನು ಕವಿರಾಜ ಮಾರ್ಗ ತಿಳಿಸಿಕೊಡುತ್ತದೆ. ಪಂಪ ಮಾನವ ಕುಲ ತಾನೊಂದೇ ವಲಂ ಎಂದು ಜಗತ್ತಿನಲ್ಲಿಯೇ ಮೊದ ಮೊದಲು ಮನುಜರೆಲ್ಲ ಒಂದೇ ಕುಲ ಒಂದು ಹೇಳಿದ ಕವಿ. ಆದರೆ ಇಂದು ನಮ್ಮ ನಮ್ಮ ಅಹಂಕಾರಗಳಿಂದ ಬಡೆದಾಡುತ್ತಿದ್ದೇವೆ. ಸರಸ್ವತಿ ಎನ್ನುವವಳು ಎಲ್ಲ ಭಾಷೆಗಳಲ್ಲಿ ಇದ್ದಾಳೆ. ಅದಕ್ಕೆ ಕನ್ನಡಿಗರು ಎಲ್ಲ ಭಾಷೆಯನ್ನು ಗೌರವಿಸಬೇಕು.
ಹಾಗೇ ಉಳಿದ ಭಾಷಿಕರು ಕನ್ನಡ ಭಾಷೆಯನ್ನು ಗೌರವಿಸಬೇಕು. ಹೀಗೆ ಜಗತ್ತಿನ ಎಲ್ಲ ಭಾಷೆಗಳಲ್ಲಿ ಅಡಗಿರುವಂಥ ಜ್ಞಾನವನ್ನು ಪಡೆದುಕೊಳ್ಳುವಂತ ಶ್ರೇಷ್ಠ ಆದರ್ಶವಾಗಿರಬೇಕು ಎಂಬುದು ಪಂಪನ ನುಡಿಯಂತೆ ಕನ್ನಡಿಗರಿದ್ದಾರೆ. ವಚನಕಾರರು ಚೈತನ್ಯದ ಸೂತ್ರವನ್ನು ಕಟ್ಟಿಕೊಟ್ಟಿರುವರು. ಲಿಂಗಭೇದ, ವರ್ಗಭೇದವಿಲ್ಲದೇ ಬದುಕು ಇರಬೇಕೆಂದು ನಮಗೆ ಕಟ್ಟಿಕೊಟ್ಟಿದ್ದಾರೆ. ಶರಣರು ನಡೆ-ನುಡಿ ಸೂತ್ರವನ್ನು ಕಟ್ಟಕೊಟ್ಟಿದ್ದಾರೆ. ಕನ್ನಡಿಗರು ನುಡಿದರೆ ಮುತ್ತಿನ ಹಾರದಂತಿರಬೇಕು. ದಾಸೋಹದ ದೀಕ್ಷೆ ಕೊಟ್ಟ ಬಸವಣ್ಣ ಕನ್ನಡ ನೆಲಕ್ಕೆ ಸಂಸ್ಕಾರವನ್ನು ಕೊಟ್ಟಿಕೊಟ್ಟಿದ್ದಾರೆ. ಇಂಥ ಆಗಿಹೋದ ಚೇತನಗಳು ಇಂಥ ಸೂತ್ರಗಳನ್ನು ಕನ್ನಡ ನೆಲಕ್ಕೆ ನೀಡಿದ್ದರಿಂದ ಏನೆಲ್ಲ ತೊಂದರೆಗಳನ್ನು ಎದುರಿಸಿಯೂ ಬಾಳುತ್ತಿದೆಯೆಂದರೆ ಇಂಥ ಮಹಾಮಹಿಮರು ಕಾರಣರಾಗಿದ್ದಾರೆ ಎಂದು ಪ್ರೊ. ಶಶಿಧರ ತೋಡಕರ ಹೇಳಿದರು. ವಾರಣಾಸಿ ಬನಾರಸ್ ವಿಶ್ವವಿದ್ಯಾಲಯದ ಡಾ. ಬಸವಪ್ರಭು ಜಿರ್ಲಿಹೊರನಾಡಿನಲ್ಲಿ ಕನ್ನಡಿಗರ ಕೊಡುಗೆ’ ಕುರಿತು ವಿಷಯ ಮಂಡಿಸಿದರು. ಧಾರವಾಡದ ಪರಿಸರ ಚಿಂತಕ ಆರ್.ಜಿ. ತಿಮ್ಮಾಪೂರ ಪ್ರತಿಕ್ರಿಯಿಸಿದರು. ಧಾರವಾಡದ ಹಿರಿಯ ಸಾಹಿತಿ ವೆಂಕಟೇಶ ಮಾಚಕನೂರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಡಿ.ಎಚ್. ವೆಂಕಟೇಶ ಸ್ವಾಗತಿಸಿದರು. ಎಸ್. ಅಹಮದ್ ವಂದಿಸಿದರು. ಕೆ. ಹನುಮಂತಪ್ಪ ನಿರೂಪಿಸಿದರು.