ವಿಕಾಸ ಪಥ ಜ್ಯೋತಿ ಯಾತ್ರೆಗೆ ಸ್ವಾಗತ. ಕಲ್ಯಾಣ ಕರ್ನಾಟಕ ಸಮೃದ್ದಿವಾಗಿದೆ – ಸದಾಶಿವ ಸ್ವಾಮಿಗಳು.
ಸಿರವಾರ.ಆ೨೬- ದೇಶದ ಸಂಸ್ಕೃತಿ, ಇತಿಹಾಸ ಹಾಗೂ ಪೂರ್ವಜರು ಕಾಪಾಡಿಕೊಂಡು ಬಂದ ಮೌಲ್ಯಗಳನ್ನು ನಮ್ಮ ಮುಂದಿನ ಯುವ ಪೀಳಿಗೆಗೆ ತಿಳಿಸುವುದು ಇಂದಿನ ದಿನಗಳಲ್ಲಿ ಅತ್ಯವಶ್ಯವಾಗಿದೆ, ಈ ನಿಟ್ಟಿನಲ್ಲಿ ಸಾದಕರನ್ನು ಗುರುತಿಸಿ ಅವರಿಂದ ಜನರಿಗೆ ಮಾಹಿತಿ ಒದಗಿಸುವುದಕ್ಕಾಗಿ ಭಾರತೀಯ ಸಂಸ್ಕೃತಿ ಉತ್ಸವ ೭ ಆಚರಣೆ ಮಾಡಲಾಗುತ್ತಿದೆ ಎಂದು ಕೊತ್ತಲ ಬಸವೇಶ್ವರ ದೇವಸ್ಥಾನದ ಪ.ಪೂ ಶ್ರೀ ಸದಾಶಿವ ಸ್ವಾಮಿಗಳು ಹೇಳಿದರು. ಕಲ್ಯಾಣ ಕರ್ನಾಟಕ ವಿಕಾಶ ಪಥ, ಕೊತ್ತಲ ಸ್ವರ್ಣ ೨೦೨೫, ಭಾರತೀಯ ಸಂಸ್ಕೃತಿ ಉತ್ಸವ ೭ ರಥಯಾತ್ರೆಯು ಪಟ್ಟಣ ಹೆಮ್ಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಸ್ವಾಗತಿಸಿ, ಜ್ಞಾನಭಾರತಿ ಶಾಲೆಯ ವರೆಗೂ ಮೆರವಣಿಗೆ ಮೂಲಕ ಕರೆದಂದು ನಂತರ ಬಹಿರಂಗ ಸಭೆಯನ್ನು ಉದೇಶಿಸಿ ಮಾತನಾಡಿ ೨೦೨೫ ರಲ್ಲಿ ಸೇಡಂ ಪಟ್ಟಣದಲ್ಲಿ ನಡೆಯಲಿರುವ ಸ್ವರ್ಣ ಜಯಂತಿ ಉತ್ಸವ ಕಾರ್ಯಕ್ರಮ ದೇಶದಲ್ಲಿ ಕುಂಭಮೇಳ ಬಿಟ್ಟರೇ, ಎರಡನೇ ಅತೀದೊಡ್ಡ ಸಮಾರಂಭವಾಗಲಿದೆ. ಇದಕ್ಕಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತಲಿನ ೧೫ ಗ್ರಾಮಗಳಲ್ಲಿ ರೂಪುರೇಷೆಗಳ ಸಿದ್ಧತೆ ನಡೆಸಲಾಗುತ್ತಿದೆ.ಹೈ- ಕರ್ನಾಟಕ ದಿಂದ ಕಲ್ಯಾಣ ಕರ್ನಾಟಕ ಹೆಸರಾಗಿದೆ. ಹೊಲಿಗೆಯಂತ್ರ, ಕಂಪ್ಯೂಟರ್, ಶುದ್ದಕುಡಿಯುವ ನೀರಿನ ಘಟಕ, ಶೈಕ್ಷಣಿಕ, ಆರೋಗ್ಯ, ಕೃಷಿ ಸೇರಿ ೨. ಸಾವಿರ ಕೊ. ಖರ್ಚಾಗುತ್ತದ, ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನ ನೀಡಿದು ಕೊತ್ತಲ ಸಂಸ್ಥೆಯಾಗಿದೆ. ಇದನ್ನು ಕಂಡು ಕೇಂದ್ರ ಸರ್ಕಾರ ಸ್ವಚ್ಚ ಭಾರತ ಹೆಸರಿನಲ್ಲಿ ಶೌಚಾಲಯ ನಿರ್ಮಾಣ ಮುಂದಾದರು,
ಕೊತ್ತಲ ಬಸವೇಶ್ವರರ ಭಾರತೀಯ ಶಿಕ್ಷಣ ಸಮಿತಿಯ ೫೦ನೇ ವರ್ಷಾಚರಣೆ ಸಹ ಅದೇ ಸಮಾರಂಭದಲ್ಲಿ ಆಯೋಜಿಸಲಾಗಿದೆ. ಸಂಸ್ಥೆಯಲ್ಲಿ ಕಲಿತ ೧೫ ಸಾವಿರ ವಿದ್ಯಾರ್ಥಿಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಈ ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಹಾರಕೂಡ ಪೂಜ್ಯರು ಮಾರ್ಗದರ್ಶನ ಮಾಡಲಿದ್ದಾರೆ. ಸ್ವರ್ಣ ಜಯಂತಿಯ ಕಾರ್ಯಕ್ರಮದ ಕಲ್ಯಾಣ ಕರ್ನಾಟಕ ಭಾಗದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೊಪ್ಪಳ ಗವಿ ಮಠದ ಶ್ರೀ ಗವಿ ಸಿದ್ದೇಶ್ವರ ಸ್ವಾಮಿಗಳು ಸಲಹೆ ನೀಡುತ್ತಿದ್ದಾರೆ. ಅದರಂತೆ ರಾಷ್ಟ್ರ ಮಟ್ಟದ ಸ್ವಾಗತ ಸಮಿತಿಗೆ ನೇತೃತ್ವವನ್ನು ಸುತ್ತೂರು ಮಠದ ಜಗದ್ಗುರುಗಳು ವಹಿಸಿದ್ದೂ, ಯಾದಗಿರಿ ಆರ್ಯಭಟ್ಟ ಇಂಟರ್ನ್ಯಾಷನಲ್ ಅಕಾಡೆಮಿ ಸಂಸ್ಥಾಪಕ ಸುಧಾಕರರಡ್ಡಿ ಪಾಟೀಲ್ ಅನಪುರ ಅಧ್ಯಕ್ಷರಾಗಿದ್ದಾರೆ. ಇಡೀ ಕಾರ್ಯಕ್ರಮದ ಯಶಸ್ವಿಗೆ ೧೦ ತಂಡಗಳನ್ನು ರಚನೆ ಮಾಡಲಾಗಿದೆ. ೨೦೨೫ರ ಜ.೨೯ ರಿಂದ ಫೆ.೬ ರವರೆಗೆ ಭಾರತೀಯ ಸಂಸ್ಕೃತಿ ಉತ್ಸವ-೭ ಕಾರ್ಯಕ್ರಮ ೨೫೦ ಎಕರೆ ಪ್ರದೇಶದಲ್ಲಿ ಜರುಗಲಿದ್ದು, ಸುಮಾರು ೪೦ ಲಕ್ಷ ಜನರು ೯ ದಿನದ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಂದು ವರ್ಷದ ಮುಂಚಿತವಾಗಿಯೇ ತಯಾರಿ ನಡೆದಿದೆ. ಕಲ್ಯಾಣ ಕರ್ನಾಟಕದ ಸಮಗ್ರ ವಿಕಾಸ ನಮ್ಮ ಮೂಲಧ್ಯೇಯವಾಗಿದ್ದು, ಭಾರತೀಯ ಸಂಸ್ಕೃತಿ, ಪರಂಪರೆ ಜಗತ್ತಿಗೆ ಪರಿಚಯಿಸುವುದರ ಜೊತೆ, ಮನುಷ್ಯನ ಮನಸ್ಸು ಬದಲಾವಣೆಯಾಗಲು ೨೦೨೫ರ ಭಾರತೀಯ ಸಂಸ್ಕೃತಿ ಉತ್ಸವ ಪ್ರೇರಣೆಯಾಗಲಿದೆ. ಸ್ಥಳೀಯ ಪ್ರತಿಭೆಗಳಿಗೆ ಸ್ಪರ್ದೇಗೆ ಅವಕಾಶ ನೀಡಲಾಗುವುದು ಆಸಕ್ತರು ನಿಮ್ಮ ವ್ಯಾಪ್ತಿಯ ಸದಸ್ಯರಲ್ಲಿ ಹೆಸರು ನೊಂದಣಿ ಮಾಡಿಸಿ ಎಂದರು.
ಜಿಲ್ಲಾದ್ಯಕ್ಷ ರಾಜಶೇಖರಹಿರೆಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿ.ಲೋಕರೇಡ್ಡಿ ಸಿರವಾರ ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆಸಲ್ಲಿಸುವ ಮೂಲಕ ಶ್ರೀಕೃಷ್ಣ ಜಯಂತಿ ಆಚರಣೆ ಮಾಡಲಾಯಿತು.
ವೀರಶೈವ ಸಮಾಜದ ತಾ.ಅದ್ಯಕ್ಷ ಅಯ್ಯನಗೌಡ ಐರೇಡ್ಡಿ, ಬಿಜೆಪಿ ತಾಲೂಕ ಅದ್ಯಕ್ಷ ಜೆದೇವರಾಜಗೌಡ, ವಿಕಾಸ ಅಕಾಡಮಿ ಅದ್ಯಕ್ಷ ಟಿ..ಬಸವರಾಜ, ಪ.ಪಂ ಸದಸ್ಯ ವೈ.ಭೂಪನಗೌಡ, ವಿಜಯಕುಮಾರ ಗುಡದಮನೆ, ಪರಮೇಶ್ವರಪ್ಪ, ಜ್ಞಾನಭಾರತಿ ಶಾಲೆಯ ಅದ್ಯಕ್ಷ ಪ್ರಕಾಶ ಪಾಟೀಲ್ ಸೇರಿದಂತೆ ಇನ್ನಿತರರು ಇದರು.