ಸಾಹಿತ್ಯ ಅಭಿರುಚಿ ಬೆಳೆಸಲು ಕಾವ್ಯ ಕಮ್ಮಟ ಸಹಾಯಕ
ಸಂಜೆವಾಣಿ ವಾರ್ತೆ.
ಸಿಂಧನೂರು,ಆ೨೬:ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳಸಲು ಕಾವ್ಯ ಕಮ್ಮಟ ಗಳು ಸಹಾಯಕ ಎಂದು ಸಂಪನ್ಮೂಲ ವ್ಯಕ್ತಿ ಶಂಕರ ದೇವರು ಹಿರೇಮಠ ಹೇಳಿದರು.
ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ರಾಯಚೂರು ,ಚೆಲುವ ಚಿಣ್ಣರು ಮಕ್ಕಳ ಸಾಹಿತ್ಯ ಪತ್ರಿಕೆ ಸಿಂಧನೂರು ಸಂಯುಕ್ತಾಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಹೆಡಗಿನಾಳ ಶಾಲೆಯಲ್ಲಿ ಒಂದು ದಿನದ ಮಕ್ಕಳ ಕಾವ್ಯ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಕಾವ್ಯ ಕಮ್ಮಟಗಳು ಬರವಣಿಗೆ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಹಾಗೂ ಸಾಹಿತ್ಯರಚನೆ, ಕಲೆ, ಸಾಹಿತ್ಯ ಅಭಿಮಾನ, ಓದುವ ಅಭಿರುಚಿಯನ್ನು ಮೂಡಿಸುವಲ್ಲಿ ಕಾವ್ಯ ಕಮ್ಮಟಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬರವಣಿಗೆ ಕೌಶಲ್ಯವು ಮಹತ್ವದ್ದು. ನಿರಂತರ ಓದು ಹಾಗೂ ಸಾಹಿತ್ಯ ಕೃತಿಗಳ ಅಧ್ಯಯನದಿಂದ ಕಾವ್ಯ ರಚನಾ ಪ್ರೌಢಿಮೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಪ್ರೌಢಶಾಲೆ ಹೆಡಗಿನಾಳ ಶಾಲೆ ಮುಖ್ಯ ಗುರು ನಟರಾಜ್ ಟಿ ಮಾತನಾಡಿ ಮಕ್ಕಳು ಸಾಹಿತ್ಯ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯದ ನಿರಂತರ ಓದು ಹಾಗೂ ಅಧ್ಯಯನದಿಂದ ಬರವಣಿಗೆ ಕೌಶಲ್ಯ ಹಾಗೂ ಸಾಹಿತ್ಯ ರಚನೆಗೆ ಪ್ರೇರಣೆ ನೀಡುತ್ತವೆ. ವಿದ್ಯಾರ್ಥಿಗಳು ಕಮ್ಮಟಗಳಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆಯುವಲ್ಲಿ ಯಶಸ್ವಿಯಾಗಿ ಕಾವ್ಯ ರಚನೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಮಕ್ಕಳ ಕಾವ್ಯ ಕಮ್ಮಟದಲ್ಲಿ ೩೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಹಾಗೂ ಆರು ಸಾವಿರ ರೂ ಮೌಲ್ಯದ ಮಕ್ಕಳ ಸಾಹಿತ್ಯ ಕೃತಿಗಳನ್ನು ನೀಡಲಾಯಿತು. ಕಮ್ಮಟದಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.ವಿದ್ಯಾರ್ಥಿಗಳು ಕಾವ್ಯ ಕಮ್ಮಟದಲ್ಲಿ ರಚಿಸಿದ ಸ್ವರಚಿತ ಕವನಗಳನ್ನು ವಾಚನ ಮಾಡಿದರು.
ಕಮ್ಮಟದ ನಿರ್ದೇಶಕರಾದ ಮಹಾಂತೇಶ್.ಬಿ ಉಪಸ್ಥಿತರಿದ್ದರು ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾವ್ಯ ಕಮ್ಮಟದಲ್ಲಿ ಶಾಲೆಯ ಅತಿಥಿ ಶಿಕ್ಷಕರಾದ ಸಿದ್ದಪ್ಪ, ಪಂಪಾಪತಿ, ಮಂಜುಳಾ ಸಂಧ್ಯಾ ಉಪಸ್ಥಿತರಿದ್ದರು.ವಿದ್ಯಾರ್ಥಿ ಐಮಾವತಿ ಪ್ರಾರ್ಥಿಸಿದರೆ,ಪಂಪಾಪತಿ ಸ್ವಾಗತಿಸಿದರು ,ನಿರೂಪಣೆಯನ್ನು ಸಿದ್ದಲಿಂಗಪ್ಪ ನಡೆಸಿಕೊಟ್ಟರು.