ಮಹಾದ್ವಾರ ನಿರ್ಮಾಣಕ್ಕೆ ಅನುದಾನ ಬಿಡುಗಡೆ
ಲಕ್ಷ್ಮೇಶ್ವರ, ಆ26: ಗದಗ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಮತ್ತು ಸಂಸದೀಯ ಮತ್ತು ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಅವರು ಪಟ್ಟಣದ ಸುಭಾಷ್ ಓದುನವರ ಜೇನಿನಲ್ಲಿ ಪುರಸಭೆಗೆ ನೂತನವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ಸಿನ ಯಲ್ಲಮ್ಮಾ ದುರ್ಗಣ್ಣವರ್ ಮತ್ತು ಉಪಾಧ್ಯಕ್ಷ ಫಿರ್ದೋಷ ಆಡೂವರನ್ನು ಸಚಿವರು ಸನ್ಮಾನಿಸಿದರು.
ಬಳಿಕೆ ಮಾತನಾಡಿ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಉತ್ತರ ಮಹಾದ್ವಾರದ ನಿರ್ಮಾಣಕ್ಕಾಗಿ 50 ಲಕ್ಷ ರೂ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ್ ಪಟ್ಟಣದಲ್ಲಿ ರಸ್ತೆಗಳು, ಚರಂಡಿಗಳು ಹಾಳಾಗಿದ್ದು ಅವುಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಸಚಿವರ ಗಮನ ಸೆಳೆದರು ಆಗ ಸಚಿವ ಎಚ್ ಕೆ ಪಾಟೀಲ್ ಅವರು ಇದಕ್ಕೆ ಸಂಬಂಧಪಟ್ಟಂತೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಕಳುಹಿಸಿದರೆ ಸಂಬಂಧಪಟ್ಟ ಸಚಿವರೊಂದಿಗೆ ಸಮಾಲೋಚನೆ ಮಾಡಿ ಕೂಡಲೇ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವವರಾಗಿ ಹೇಳಿದವರು ಪಟ್ಟಣದ ಒಳಚರಂಡಿ ವ್ಯವಸ್ಥೆಯ ಬಗ್ಗೆ ಮುಂದಿನ ಕೆ ಡಿ ಪಿ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅದಕ್ಕೂ ಸಹ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿಎಸ್ ಗಡ್ಡ ದೇವರ ಮಠ ರಾಮಕೃಷ್ಣ ದೊಡ್ಡಮನಿ ರಾಮಣ್ಣ ಲಮಾಣಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತ ದೊಡ್ಮನಿ ಗುರುನಾಥ ದಾನಪ್ಪನವರ ವಿಜಿ ಪಡಿಗೇರಿ ಸುಭಾಷ್‍ಓದುನವರ ಜಯಕ್ಕ ಕಳ್ಳಿ ಜಯಕ್ಕ ಅಂದಲಗಿ ರಾಜು ಕುಂಬಿ ಮಹೇಶ ಹೊಗೆ ಸೊಪ್ಪಿನ ಮಂಜಕ್ಕ ನಂದಣ್ಣನವರ ರಾಮಣ್ಣ ಗಡದವರ ಚೆನ್ನಪ್ಪ ಜಗಲಿ ಫಕೀರೇಶ ಮ್ಯಾಟಣ್ಣನವರ ತಿಪ್ಪಣ್ಣ ಸಂಶಿ ನಾಗರಾಜ ಮಡಿವಾಳರ ಸತೀಶ ಗೌಡ ಪಾಟೀಲ ಗಂಗಪ್ಪ ದುರ್ಗಣ್ಣವರ ಬಾಬು ಅಳವಂಡಿ ರಫೀಕ್ ಕಲ್ಬುರ್ಗಿ ಯಲ್ಲಪ್ಪ ಸುರಣಗಿ ನೀಲಪ್ಪ ಶರಶುರಿ ಪದ್ಮರಾಜ ಗೌಡ ಪಾಟೀಲ ಮಂಜಪ್ಪ ಶರ ಸೂರಿ ಬಸವರಾಜ ಓದು ನವರ ಸೇರಿದಂತೆ ಅನೇಕರಿದ್ದರು.