ಸೆ.14 ರಂದು ಲೋಕ ಅದಾಲತ್
ಸಂಜೆವಾಣಿವಾರ್ತೆ
ಹರಪನಹಳ್ಳಿ: , ಅ,26- ವಕೀಲರುಗಳು ಇಂದಿನಿಂದಲೇ ರಾಜೀಯಾಗುವಂತಹ ಪ್ರಕಣಗಳ ಬಗ್ಗೆ ನಿಮ್ಮ ಕಕ್ಷಿದಾರರಿಗೆ ತಿಳಿಸಿ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಿ  ಎಂದು  ಹಿರಿಯ ಸಿವಿಲ್  ನ್ಯಾಯಾಲಯದ ನ್ಯಾಯಾಧೀಶರಾದ ಸಿವಿಲ್ ನ್ಯಾಯಾಧೀಶರಾದ  ಉಷಾರಾಣಿ ಆರ್. ಹೇಳಿದರು.
ಪಟ್ಟಣದ  ನ್ಯಾಯಾಲಯದ ಆವರಣದಲ್ಲಿ ಶನಿವಾರ  ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಹರಪನಹಳ್ಳಿ ಇವರ ಸಂಯುಕ್ತಾಶ್ರದಲ್ಲಿ  ಸಾರ್ವಜನಿಕರಿಗೆ ಮತ್ತು ಕಕ್ಷಿದಾರರಿಗೆ ಲೋಕಾದಾಲತ್   ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಸೆಪ್ಟೆಂಬರ್ 14ರಂದು  ಶನಿವಾರ  ನಡೆಯಲಿರುವ ರಾಷ್ಟ್ರೀಯ ಲೋಕಅದಲತ್ ನಡೆಯಲಿದ್ದು, ಈ ವೇಳೆ ವಕೀಲರು ತಮ್ಮ ಕಕ್ಷಿದಾರರ ಪ್ರಕರಣಗಳನ್ನು ರಾಜೀ ಮೂಲಕ ಇತ್ಯಾರ್ಥಪಡಿಸಿಕೊಳ್ಳಲು  ತಿಳಿಸಿ ಎಂದು ವಕೀಲರುಗಳಿಗೆ  ಸಲಹೆ ನೀಡಿದರು.
ಸಿವಿಲ್ ನ್ಯಾಯಾಧೀಶರಾದ ಮನು ಶರ್ಮ ಎಸ್.ಪಿ. ಮಾತನಾಡಿ,  ಕಕ್ಷಿದಾರರು ಮುಕ್ತ ಮನಸ್ಸಿನಿಂದ ಸಣ್ಣ ಪುಟ್ಟ ಪ್ರಕರಣಗಳನ್ನು ರಾಜೀ ಮಾಡಿಕೊಂಡಗ ನಿಮ್ಮ ಮಕ್ಕಳ ಭವಿಷ್ಯ ಉಜ್ಜಲವಾಗಿತ್ತದೆ ನಿಮ್ಮ ಕುಟುಂಬ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುತ್ತದೆ. ದ್ವೇಷದಿಂದ ಏನು ಸಾಧನೆ ಮಾಡಲು ಆಗುವದಿಲ್ಲ ಪ್ರೀತಿ ವಿಶ್ವಾಸದಿಂದ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳುವುದಕ್ಕೆ ಸಾಧ್ಯವಾಗುತ್ತದೆ. ಎಂದರು.
ಈ ಸಂದರ್ಭದಲ್ಲಿ   ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೇಲ್ ಮಾತನಾಡಿ,   ಅಪರ ಸರ್ಕಾರಿ ವಕೀಲ ಕೆ.ಜಗದಪ್ಪ,  ಉಪಾಧ್ಯಕ್ಷ ಸಿ. ಪೀರ್ ಅಹಮ್ಮದ್, ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಸರ್ಕಾರಿ ಅಭಿಯೋಜಕಿಯಾರಾದ ಎನ್. ಮಿನಾಕ್ಷೀ ,ನಿರ್ಮಲ, ವಕೀಲರುಗಳಾದ ಎಂ.ಮೃತಂಜಯ್ಯ, ತಾಲೂಕು ಕಾನೂನು ಸೇವ ಸಮಿತಿಯ ಸಿಬ್ಬಂದಿಗಳಾದ ಕೊಟ್ರೇಶ್, ಬಸವರಾಜ್,  ಸೇರಿದಂತೆ ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳು ಹಾಜರಿದ್ದರು.