ರಾಯರ ಆರಾಧನೆ ಸಂಪನ್ನ: ೬೭ ಲಕ್ಷ ಭಕ್ತರು ಭಾಗಿ
ರಾಯಚೂರು, ಆ.೨೬- ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ ಸಂಪನ್ನಗೊಂಡಿದೆ. ರಾಯರ ಆರಾಧನೆಯಲ್ಲಿ ಸುಮಾರು ೬೭ ಲಕ್ಷ ಭಕ್ತರು ಭಾಗಿಯಾಗಿದ್ದರು. ಮಂತ್ರಾಲಯದಲ್ಲಿ ಇಂದು ಏಕಕಾಲದಲ್ಲಿ ೩೫೦ ನೃತ್ಯ ಕಲಾವಿದರಿಂದ ನಾಮ ರಾಮಾಯಣಂ ನೃತ್ಯ ಪ್ರದರ್ಶನ ನಡೆಯಿತು.
ಮಠದ ಕಾರಿಡಾರ್‌ನಲ್ಲಿ ಶ್ರೀ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಸಮ್ಮುಖದಲ್ಲಿ ಸ್ಥಳೀಯ, ಜಪಾನ್, ಜರ್ಮನಿ, ಇಂಡೋನೇಷಿಯಾ ಸೇರಿ ವಿವಿಧ ಕಡೆಗಳಿಂದ ಆಗಮಿಸಿದ್ದ ೩೫೦ ಕಲಾವಿದರು ನೃತ್ಯ ಮಾಡಿದರು. ಒಂದೇ ವೇದಿಕೆಯಲ್ಲಿ ೧೫ ನಿಮಿಷಗಳ ಕಾಲ ಶ್ರೀನಾಮ ರಾಮಾಯಣಂ ಗೀತಗೆ ನೃತ್ಯ ಮಾಡುವ ಮೂಲಕ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆಯಲು ಕಲಾವಿದರು ಈ ನೃತ್ಯ ಪ್ರದರ್ಶನ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನೃತ್ಯ ಅಕಾಡಮಿ ಕೈ ಸೇರಲಿದೆ.