ಪೌರಾಯುಕ್ತರ ನಿರ್ಲಕ್ಷ್ಯ ನಗರಸಭಾ ಸದಸ್ಯರಿಂದ ಪ್ರತಿಭಟನೆ.
ಸಂಜೆವಾಣಿ ವಾರ್ತೆ
ಹೊಸಪೇಟೆ ಆ26: ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೊರಿದ ನಗರಸಭೆಯ ಪೌರಾಯುಕ್ತರನ್ನು ಕಠಿಣ ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಿ ನಗರಸಭಾ ಸದಸ್ಯರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಬೆಳಿಗ್ಗೆ ಜರುಗಿದೆ.
ಹೊಸಪೇಟೆ ನಗರಸಭೆಯ ಮುಂದೆ ಪಕ್ಷಾತೀತವಾಗಿ ಪ್ರತಿಭಟಿಸಿ ಸದಸ್ಯರು ಸದಸ್ಯರು ಯಾವುದೆ ಕೆಲಸಗಳನ್ನು ಹೇಳಿದರೂ ನಿರ್ಲಕ್ಷ್ಯ ತೊರುವ ಪೌರಾಯುಕ್ತರು ರಸ್ತೆ, ಚರಂಡಿ, ಕಲುಷಿತ ನೀರು, ರಸ್ತೆಯಲ್ಲಿ ಗುಂಡಿಮುಚ್ಚುವು ಸೇರಿದಂತೆ ಯಾವುದೆ ಸಣ್ಣ ಕೆಲಸವನ್ನು ಮಾಡದೆ ದಿವ್ಯ ನಿರ್ಲಕ್ಷ್ಯ ತೊರುತ್ತಿರುವುದು ನಿನ್ನೆ ಮಗು ಗುಂಡಿಯಲ್ಲಿ ಬಿದ್ದು ಸತ್ತಿದ್ದು,  ಕಳೆದ ತಿಂಗಳು ಬೀದಿಯಲ್ಲಿ  ಶಾಲೆಗೆ ಹೋಗುವಾಗ ಮಗುವಿಗೆ ಬೀದಿನಾಯಿ ಕಚ್ಚಿ ತೀವ್ರ ಗಾಯಗೊಂಡಿದ್ದು ಸೇರಿದಂತೆ ಅನೇಕ ಘಟನೆಗಳು ಸಾಕ್ಷಿಇದ್ದು ಇಂತಹ ದಿವ್ಯ ನಿರ್ಲಕ್ಷ್ಯ ವಹಿಸುವ ಪೌರಾಯುಕ್ತರು ಹೊಸಪೇಟೆಗೆ ಬೇಕೆ ? ಎಂದು ಪ್ರಶ್ನಿಸುವ ಮೂಲಕ  ಪ್ರತಿಭಟನೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂತೋಷ, ಗೌಸ್, ಎಲ್.ಎಸ್.ಆನಂದ, ಜೀವರತ್ನಮ್, ಮೊಮತಾಜ್ ಬೇಗಂ, ಜಗದೀಶ ಕಾಮಟಗಿ, ರೂಪೇಶ ಕುಮಾರ. ರೋಹಿಣಿ ವೆಂಕಟೇಶ, ರಮೇಶ ಗುಪ್ತಾ  ಸೇರಿದಂತೆ ಸದಸ್ಯರು ಮಾತನಾಡಿದರು.
ತೊಲಗಲಿ ತೊಲಗಲಿ ಪೌರಾಯುಕ್ತರು ತೊಲಗಲಿ, ಧಿಕ್ಕಾರ ಧಿಕ್ಕಾರ ಪೌರಾಯುಕ್ತರಿಗೆ ಧಿಕ್ಕಾರ, ಇದೀಗ ಜಿಲ್ಲಾಧಿಕಾರಿಗಳೇಆಡಳಿತಾಧಿಕಾರಿಯು ಆಗಿರುವುದರಿಂದ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು, ಪ್ರತಿ ಸಾವಿನ ನಂತರವೇ ಕ್ರಮಕ್ಕೆ  ಮುಂದಾಗುವರೋ ಹೇಗೆ?  ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪೌರಾಯುಕ್ತರನ್ನು  ವಜಾ ಮಾಡಬೇಕು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು, ಸದ್ಯ ನಾವು ಹಣ ನೀಡಬಹುದು ಆದರೆ ಮಗವನ್ನು ತಂದುಕೊಡಲು ಸಾಧ್ಯವೆ ? ತಾಯಿ ನೋವು ಸರಿ ಮಾಡಲು ಸಾಧ್ಯವೇ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.