ವೀರಶೈವ ಮಹಸಭಾ ರಾ.ಕಾ.ಕಾರಿಣಿ ಸದಸ್ಯರಾಗಿ ಅಂಗಡಿ ಶಂಕ್ರಪ್ಪ, ಕರೀಗೌಡ ಆಯ್ಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,26-  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯ ಕಾರಿಣಿ ಸದಸ್ಯತ್ವದ  27 ಸ್ಥಾನಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ  ಬಳ್ಳಾರಿಯ ಅಂಗಡಿ ಶಂಕ್ರಪ್ಪ ಮತ್ತು ಕರೀಗೌಡ ಅವರು ಆಯ್ಕೆಯಾಗಿದ್ದಾರೆ.  ಇಲ್ಲಿಂದ ಸ್ಪರ್ಧೆ ಮಾಡಿದ್ದ  ಗೋನಾಳ್ ರಾಜಶೇಖರಗೌಡ ಮತ್ತು ನಂದೀಶ್ ಮಠಂ ಪರಾಭವಗೊಂಡಿದ್ದಾರೆ.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಹೈಸ್ಕೂಲ್ ನಲ್ಲಿ ನಿನ್ನೆ  ಸಂಜೆ 5 ರ ವರೆಗೆ ಜಿಲ್ಲೆಯ ಸಿರುಗುಪ್ಪ ತಾಲೂಕು ಹೊರತುಪಡಿಸಿ ಇನ್ನುಳಿದ ತಾಲೂಕಿನ ಮತದಾರರು ಐದು ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು.
ಸಿರುಗುಪ್ಪ ಮತಗಟ್ಟೆ ಸೇರಿದಂತೆ ಬಳ್ಳಾರಿ ಜಿಲ್ಲೆಯ ಒಟ್ಟು 2049 ಮತದಾರರ ಪೈಕಿ 1095 ಮತದಾರರು ಅಂದರೆ ಶೇ 44 ರಷ್ಟು ಮಾತ್ರ ಮತದಾನವಾಯಿತು.
ಮತದಾನದ ನಂತರ ಮತಗಳ ಎಣಿಕೆ ನಡೆಯಿತು ಜಿಲ್ಲೆಯಲ್ಲಿ ಅಂಗಡಿ ಶಂಕ್ರಪ್ಪಗೆ   -885.ನಂದೀಶ್ ಮಠಂ ಅವರಿಗೆ 879, ಗೋನಾಳ್ ರಾಜಶೇಖರ ಗೌಡ ಅವರಿಗೆ ಪಡೆದ ಮತಗಳು -857 ಮತ್ತು
ಕರೇಗೌಡ ಅವರಿಗೆ-761 ಮತಗಳು ಬಂದಿವೆ ಎಂದು ಚುನಾವಣಾಧಿಕಾರಿ ಡಾ.ವಿ.ಎಸ್.ಪ್ರಭಯ್ಯ ತಿಳಿಸಿದ್ದಾರೆ.
ಅಂಗಡಿ ಶಂಕ್ರಪ್ಪ ಮತ್ತು ಕರೀಗೌಡ ಅವರು ಸಚಿವ ಈಶ್ವರ ಖಂಡ್ರೆ ಅವರ ಪ್ಯಾನಲ್ ನಲ್ಲಿ ಗುರುತಿಸಿಕೊಂಡಿದ್ದರಿಂದ ಗೆಲುವಿಗೆ ಸಹಕಾರಿಯಾಯ್ತು.
ವೀರಶೈವ ಲಿಂಗಾಯತ ಮಹಾಸಭಾದಲ್ಲಿ  ಬಳ್ಳಾರಿಯಿಂದ ಕೇಂದ್ರಕಾರ್ಯಕಾರಿ ಸಮಿತಿಗೆ ಕೋರಿ ವಿರೂಪಾಕ್ಷಪ್ಪ ಅವಿರೋಧವಾಗಿ ಆಯ್ಕೆಯಾದರೆ. ರಾಜ್ಯ ಕಾರ್ಯಕಾರಿಣಿಗೆ ಅಂಗಡಿ ಶಂಕ್ರಪ್ಪ ಮತ್ತು ಕರೀಗೌಡ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಇಂದು ಒಟ್ಟಾರೆ ಫಲಿತಾಂಶವನ್ನು ಚುನಾವಣಾಧಿಕಾರಿಗಳು ಘೋಷಣೆ ಮಾಡಲಿದ್ದಾರೆ.
ಶ್ಯಾಮನೂರು ಶಿವಶಂಕ್ರಪ್ಪ ಅವರ ರಾಷ್ಟ್ರೀಯ ಆಧ್ಯಕ್ಷತೆ, ಶಂಕರ ಬಿದರಿ ಅವರ ರಾಜ್ಯ ಅಧ್ಯಕ್ಷತೆ ಮತ್ತು ಬಳ್ಳಾರಿಯಲ್ಲಿ ಬಿಚ್ಚುಗಲ್ಲು ಪಂಚಾಕ್ಷರಪ್ಪ ಅವರ ಅಧ್ಯಕ್ಷತೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿ ಮತ್ತು ಸಂಘಟನೆ ನಡೆಯಬೇಕಿದೆ.