ರಾಯಲ್ ಕಾಲೋನಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,26-  ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದಂತೆ ಪ್ರತಿ ಯುಗದಲ್ಲಿ ಧರ್ಮ ಮರುಸ್ಥಾಪನೆಗೆ ಶ್ರೀಕೃಷ್ಣನು ಬರುತ್ತಾನೆ ಎನ್ನುವದು ನಂಬಿಕೆ. ಧರ್ಮವನ್ನು ಸ್ಥಾಪನೆ ಮಾಡಲು ಶ್ರೀಕೃಷ್ಣ ಜನ್ಮವೆತ್ತಿದ ದಿನ ಶ್ರೀಕೃಷ್ಣ ಜನ್ಮಾಷ್ಟಮಿ.  ಈ ಸುದಿನವನ್ನು ಬಳ್ಳಾರಿಯಲ್ಲಿ ರಾಯಲ್  ಕಾಲೋನಿಯಲ್ಲಿರುವ ಶ್ರೀ ವಿಠಲ ಕೃಷ್ಣ ದೇಗುಲದಲ್ಲಿ  ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಶ್ರೀಕೃಷ್ಣನನ್ನು ಉಯ್ಯಾಲೆಯಲ್ಲಿ ಹಾಕಿ ತೂಗುವ ಮೂಲಕ ಸುಮಂಗಲೆಯರು ಕೃಷ್ಣನಿಗೆ ಬೆಳಿಗ್ಗೆ ಲಾಲಿ ಹಾಡನ್ನು ಹಾಡಿದರು.   ಪುಟ್ಟ ಪುಟ್ಟ ಮಕ್ಕಳು ಕೂಡ  ಕೃಷ್ಣ ದೇವಸ್ಥಾನದಲ್ಲಿ ನಾಮ ಸ್ಮರಣೆಯ ಕೀರ್ತನೆಗಳನ್ನು ವಿವಿಧ ಧಾರ್ಮಿಕ ಹಾಡೋ ಮೂಲಕ ಗಮನ ಸೆಳೆದರು.
ಇನ್ನೂ ಬೆಳಿಗ್ಗೆ  ನೈರ್ಮಲ್ಯ ವಿಸರ್ಜನೆ , ಸುಪ್ರಭಾತ ನಿರ್ಮಲ್ಯಾಭಿಷೇಕ ಬಳಿಕ ಕೃಷ್ಣನಿಗೆ ಆರತಿ ಬೆಳಗಿ ಸ್ವಾಗತಿಸೋದೋ ಸೇರಿದಂತೆ ಮಹಾಭಿಷೇಕ, ಪಂಚಾಮೃತಭಿಷೇಕ ಮಾಡಲಾಯಿತು. ತುಳಸಿ ಮಣಿಯಲ್ಲಿ ಕೃಷ್ಣನ ಅಲಂಕಾರವನ್ನು ಅದ್ಧೂರಿಯಾಗಿ ಮಾಡಲಾಗಿತ್ತು.
ಕೃಷ್ಣನ ಉತ್ಸವ ಮೂರ್ತಿಯನ್ನು ನಗರ ಪ್ರದಕ್ಷಿಣೆ ಮಾಡೋ ಮೂಲಕ ಮನೆ ಮನೆಗೂ  ಕರೆದುಕೊಂಡು ಹೋಗಲಾಯಿತು.
ಮನೆಗೆ ಬಂದ ಕೃಷ್ಣನ ಉತ್ಸವ ಮೂರ್ತಿಗೆ ಭಕ್ತರು ಹಾಲು ಮೊಸರು ನೀಡಿ ಆರತಿ ಬೆಳಗಿದರು. ಈ ವೇಳೆ ಮಹಿಳೆಯರು ಮಹಿಳೆಯರು ಕೋಲಾಟದ ಜೊತೆಗೆ ಭಕ್ತಿ ಗೀತೆಗಳನ್ನು ಹಾಡೋ ಮೂಲಕ ಸಂಭ್ರಮಿಸಿದರು.
ಸಂಜೆ ದಾಸವಾಣಿ:
ಕೃಷ್ಣ ಜನ್ಮಾಷ್ಟಮಿ ನಿಮಿತ್ತ  ಸಂಜೆ ದೇವಸ್ಥಾನದ ಮುಂಭಾಗದಲ್ಲಿ ಬಳ್ಳಾರಿಯ ಸಪ್ತಸ್ವರ ಕಲಾ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದ್ಯಾ ರಘುನಾಥ್, ವಿಭಾ ಆರ್ ಕುಲಕರ್ಣಿ,  ಜಯತೀರ್ಥ ಜಹಾಗಿರದಾರ್,  ಮುಕುಂದ್ ಜಹಗೀರದಾರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ
ಒಕ್ಕೂಟದ ಅಧ್ಯಕ್ಷ  ಪ್ರಕಾಶ ರಾವ್, ಜಿ.ವಿ.‌ಪಟವಾರಿ, ರಘುರಾಮ, ಕೃಷ್ಣ ಮೂರ್ತಿ ಉದಯ, ಪ್ರಾಣೆಶ್, ರಾಘವೇಂದ್ರ ರಾವ್ , ವೆಂಕಟೇಶ, ಶೋಭಾರಾಣಿ, ಸುನಿತಾ, ಕವಿತಾ, ಮಮತ, ಹರಿಪ್ರಿಯಾ,ವೇದಾವತಿ, ವೀಣಾ, ಲಕ್ಷ್ಮೀ, ರಮಾ, ವಿಜಯಲಕ್ಷ್ಮೀ, ಪೂರ್ಣಿಮಾ, ಸೇರಿದಂತೆ ಇತರರು ಇದ್ದರು.