ಹರಿಹರದ ತುಂಗಭದ್ರಾ ನದಿಯ‌ತಟದಲ್ಲಿ‌ ಗಂಗಾಪೂಜೆ
ಸಂಜೆವಾಣಿ ವಾರ್ತೆ
ಹರಿಹರ.ಆ.೨೬ : ಶ್ರಾವಣ ಮಾಸದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಾವಣಗೆರೆಯ ಗಾಂಧಿನಗರದ 5ನೇ ಕ್ರಾಸ್ ನಲ್ಲಿರುವ ಶ್ರೀ ವರಟ್ಟಿ ದುರ್ಗಾಂಬಿಕಾ ದೇವಿ, ಶ್ರೀ ಮರಿಯಮ್ಮ ದೇವಿ ಹಾಗೂ ಶ್ರೀ ಮಲೆನಾಡು ಚೌಡೇಶ್ವರಿ ದೇವಿಯ ಶ್ರಾವಣ ಮಾಸದ ಗಂಗಾ ಪೂಜೆಯ ಕಾರ್ಯಕ್ರಮವನ್ನು ಹರಿಹರದ ಶ್ರೀ ರಾಘವೇಂದ್ರ ದೇವಸ್ಥಾನದ ಹಿಂಭಾಗದಲ್ಲಿರುವ ತುಂಗಭದ್ರ ನದಿಯ ದಡದಲ್ಲಿ ದೇವಿ ಪೂಜೆಯನ್ನು ನೆರವೇರಿಸಲಾಯಿತು. ಹಾಗೂ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಅದೇ ದಿನ ರಾತ್ರಿ ದಾವಣಗೆರೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀದೇವಿಯ ರಥೋತ್ಸವ ಬಹು ವಿಜೃಂಭಣೆಯಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪದಾಧಿಕಾರಿಗಳಾದ ರಾಮಸ್ವಾಮಿ, ಈಶ್ವರ್, ವಾಸು, ರಾಮಣ್ಣ ಹಾಗೂ ದೇವಸ್ಥಾನದ ಅರ್ಚಕರು ಮುಂತಾದವರು ಉಪಸ್ಥಿತರಿದ್ದರು