ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ “ನವನಕ್ಷತ್ರ ಸನ್ಮಾನ”
ಉಜಿರೆ: ಬೆಂಗಳೂರಿನಲ್ಲಿ  ಅರಮನೆ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಟಿ.ವಿ. ೯ ಸುದ್ದಿ ವಾಹಿನಿಯ ಹದಿನೇಳನೆ ವಾರ್ಷಿಕ ಸಂಭ್ರಮಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಧಾರ್ಮಿಕ ಮತ್ತು ಸಾಮಾಜಿಕ  ಕ್ಷೇತ್ರಗಳಲ್ಲಿ ಮಾಡಿದ ಅನುಪಮ ಸೇವೆಗಾಗಿ “ನವನಕ್ಷತ್ರ ಸನ್ಮಾನ-೨೦೨೪” ಪ್ರಶಸ್ತಿ ಪ್ರದಾನ ಗೌರವಿಸಿದರು. ಟಿ.ವಿ. ೯ ವಾಹಿನಿಯ ಕರ್ನಾಟಕ ರಾಜ್ಯದ ಮುಖ್ಯಸ್ಥರಾದ ರಾಹುಲ್ ಚೌಧರಿ ಉಪಸ್ಥಿತರಿದ್ದರು.