ರಸ್ತೆ ಡಾಂಬರೀಕರಣ ನೂರು ಕೋಟಿ ರೂ. ಮಂಜೂರು
ಮಾಲೂರು.ಆ.೨೬- ಇನ್ನೊಂದು ವರ್ಷದಲ್ಲಿ ತಾಲೂಕಿನಲ್ಲಿ ರಸ್ತೆಗಳನ್ನು ಗುಣಮಟ್ಟದರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಅವರು ಪಟ್ಟಣದ ಮುಖ್ಯ ರಸ್ತೆಯು ಎಸ ಎಫ್ ಸಿ ಯೋಜನೆಯ ಎರಡನೇ ಹಂತದ ಡಾಂಬರೀಕರಣ ವೀಕ್ಷಿಸಿ ಮಾತನಾಡಿ, ತಾಲೂಕಿನ ಗ್ರಾಮ ಸಡಕ್,ಗ್ರಾಮ ಸಮರ್ಪಕ ರಸ್ತೆ, ಜಿಲ್ಲಾ ರಾಜ್ಯಹೆದ್ದಾರಿಗಳುಅಭಿವೃದ್ಧಿಗೊಳ್ಳಲಿದ್ದುಎಲ್ಲವುಮಂಜೂರಾತಿಯ ವಿವಿಧ ಹಂತದಲ್ಲಿದೆ ಎಂದರು. ಹೊಸ ಯೋಜನೆಗಳೂ ಸೇರಿವೆ: ೨೦೧೮-೧೯ ರಲ್ಲಿ ಈಯೋಜನೆಗೆ ಮಂಜೂರಾತಿ ಸಿಕ್ಕಿದ್ದರೂ ಹಣ ಬಿಡುಗಡೆಮಾಡದೆ ಅ೦ದಿನ ಬಿಜೆಪಿ ಸರ್ಕಾರ ಅಸಹಕಾರ ತೋರಿದ ಕಾರಣಕಾಮಗಾರಿನಿಂತುಹೋಗಿತ್ತು. ಈಗನಮ್ಮ ಸರ್ಕಾರವೇ ಇರುವುದರಿಂದ ಮಂಜೂರಾದ ಹಳೆ ಯೋಜನೆ
ಕಾಮಗಾರಿಗಳು ಸೇರಿದಂತೆ ಹೊಸ ಹೊಸ ಕಾಮಗಾರಿ ಮಂಜೂರಾಗಿವೆ. ಎಲ್ಲಕಾಮಗಾರಿಗಳು ಮತ್ತೇ ಪ್ರಾರಂಭವಾಗಲಿವೆ ಎಂದರು.
ಪುರಸಭೆಯಲ್ಲಿ ಕಾಂಗ್ರೆಸ್ಪಕ್ಷದ೧೯ಸದಸ್ಯರಿದ್ದು,ಅಧ್ಯಕ್ಷರಜತೆಯಲ್ಲಿಕೈಜೋಡಿಸಿಪಟ್ಟಣದಲ್ಲಿನಡೆಯಲಿರುವ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.
ಐದು ವರ್ಷಗಳ ಹಿಂದಿನ ಕಾಮಗಾರಿಗಳಿಗೇ ಶಾಸಕರು ಈಗ ಮತ್ತೆ ಚಾಲನೆ ನೀಡಿ ಇಂದಿನ ಸರ್ಕಾರದಿಂದ ಬಿಡುಗಡೆಯಾದ ಯೋಜನೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.ಎಂದು ಪುರಸಭೆ ಸದಸ್ಯಭಾನುತೇಜಾ ಪ ಆರೋಪಿಸಿದ್ದಾರೆ ಗುಣಮಟ್ಟದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಗುತ್ತಿಗೆದಾರರು ಗುಣಮಟ್ಟದ ರಸ್ತೆ ಕಾಮಗಾರಿಯನ್ನು ನಡೆಸುವಂತೆ ಹೇಳಿದರು ನೂತನ ಅಧ್ಯಕ್ಷರು ಉಪಾಧ್ಯಕ್ಷರು ಸ್ಥಳದಲ್ಲಿ ಹಾಜರಿದ್ದು ಕಾಮಗಾರಿಯನ್ನು ವೀಕ್ಷಿಸುವಂತೆ ಹೇಳಿದರು.
ಪಟ್ಟಣದಲ್ಲಿ ನಿರ್ಮಾಣಆಗುತ್ತಿರುವ ಇಂದಿರಾ ಕ್ಯಾಂಟಿನ್ ಕಟ್ಟಡಕಾಮಗಾರಿ ಈಗಾಗಲೇ ಮುಗಿದಿದ್ದು, ಶೀಘ್ರವೇ ಉದ್ಘಾಟಿಸಲಾಗುವುದು ಗ್ರಾಮೀಣ ಪ್ರದೇಶದಜನತೆಪಟ್ಟಣಕ್ಕೆ ಬಂದಾಗ ಉತ್ತಮ ಊಟ,ತಿಂಡಿ ತಿನ್ನುವ ಅವಕಾಶ ಕಲ್ಪಿಸಲಾಗುತ್ತದೆ. ಸಾರ್ವಜನಿಕರು ಮತ್ತು ಕಾರ್ಮಿಕರು ಇದರ ಸಂಪೂರ್ಣ ಪ್ರಯೋಜನಎಂದುಪಡೆದುಕೊಳ್ಳಬೇಕುಕೆಲಸ ಈಗ ಮಾಡಲಾಗುತ್ತಿದೆ. ರಸ್ತಡಾಂಬರಿಕರಣಕಾಮಗಾರಿಯನ್ನುಸ್ವತಃ ಪರಿಶೀಲಿಸುತ್ತಿದ್ದೇನೆ.
ಯಾವುದೇಕಾರಣಕ್ಕೂ ಕಳಪೆ ಕಾಮಗಾರಿಯಾಗಲುಬಿಡುವುದಿಲ್ಲ ಎಂದು ಹೇಳಿದರು. ಯಾವುದೇ ಕಾಮಗಾರಿಯಾದರೂ ಗುತ್ತಿಗೆದಾರರು ಗುಣಮಟ್ಟ ಕಾಮಗಾರಿಯಲ್ಲಿ ಕಾಯ್ದುಕೊಳ್ಳಬೇಕು. ಈ ಬಗ್ಗೆ ಜನಪ್ರತಿನಿಧಿಗಳ ಜತೆ ಸಾರ್ವಜನಿಕರು ವೀಕ್ಷಿಸಬೇಕು ಎಂದರು. ಮುಖ್ಯಮಂತ್ರಿಸಿದ್ದರಾಮಯ್ಯನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದಮೇಲೆ ತಾಲ್ಲೂಕಿನ ರಸ್ತೆ ಗಳ ಅಭಿವೃದ್ಧಿಗೆಸುಮಾರು ೧೦೦ಕೋಟಿ ಅನುದಾನಬಿಡುಗಡೆಯಾಗಿದೆ. ಪಟ್ಟಣದ ಬಹತೇಕ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಕೋಮಲ, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ಇಮ್ ತಿಯಾಜ್ಖಾನ್ ,ವೆಂಕಟೇಶ್, ಮಂಜುನಾಥ್, ಮುರಳಿಧರ್ ಮಾಜಿ ಸದಸ್ಯ ಎ.ಅಶ್ವಥರೆಡ್ಡಿ. ದಿನೇಶ್ ಶ್ರೀನಿವಾಸ್, ಕೋಳಿ ನಾರಾಯಣ್,ಉಪಸ್ಥಿತರಿದರು.