ಶ್ರೀಕೃಷ್ಣನಿಗೆ ವಿಶೇಷ ಆಭರಣ ಅಲಂಕಾರ
ಮಾಲೂರು.ಆ.೨೬- ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಟ್ಟಣದ ರೈಲ್ವೆ ಪೀಡರ್ ರಸ್ತೆಯ ಬಳಿ ಇರುವ ಶ್ರೀ ರೇಣುಗೋಪಾಲಸ್ವಾಮಿ ದೇವಾಲಯದ ವೇಣುಗೋಪಾಲ ಸ್ವಾಮಿಗೆ ವಿಶೇಷ ಆಭರಣಗಳನ್ನು ಆರಾಧನಾ ವೇಣು ಕುಟುಂಬದವರು ಟ್ರಸ್ಟಿನ ಅಧ್ಯಕ್ಷ ಪಿ ವೆಂಕಟಸ್ವಾಮಿಯವರಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಆರಾಧನಾ ವೇಣು ಅವರು ವೇಣುಗೋಪಾಲ ಸ್ವಾಮಿಗೆ ಕೃಷ್ಣ ಜನ್ಮಾಷ್ಟಮಿಯಂದು ತೊಡಿಸಲು ಪುರೋಹಿತರು ಹಾಗೂ ಪ್ರಶ್ನೆನ ಅಧ್ಯಕ್ಷರು ಮನವಿ ಮಾಡಿದ್ದರು ಅದರಂತೆ ತಮಿಳುನಾಡಿನಿಂದ ಶ್ರೀಕೃಷ್ಣನಿಗೆ ಆಭರಣಗಳನ್ನು ತರಿಸಿ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಾಲಯ ಅರ್ಚಕ ವಾಸುದೇವಾಚಾರ್ ಮೂರ್ತಿ ಇನ್ನಿತರ ಹಾಜರಿದ್ದರು.