ಫ್ರೀಡಮ್ ಕಪ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ
ಆನೇಕಲ್. ಆ. ೨೬- ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್.ಹೊಸಹಳ್ಳಿ ಗ್ರಾಮದ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಾರತ ರತ್ನ ಡಾ|| ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಫ್ರೀಡಮ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲನೆ ಬಹುಮಾನವನ್ನು ಯಾರಂಡಹಳ್ಳಿ ತಂಡ ಪಡೆದುಕೊಂಡಿತು. ಎರಡನೇ ಬಹುಮಾನವನ್ನು ಕಾಚನಾಯಕನಹಳ್ಳಿ ತಂಡ ಪಡೆದು ಕೊಂಡಿತು ಹಾಗೆಯೇ ಮೂರನೇ ಬಹುಮಾನವನ್ನು ಹೆಚ್. ಹೊಸಹಳ್ಳಿ ತಂಡ ಪಡೆದು ಕೊಂಡಿತು. ಗೆದ್ದಂತಹ ತಂಡಗಳಿಗೆ ಜನಪ್ರತಿನಿಧಿಗಳು, ಗಣ್ಯರು ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನ ಕುಮಾರ್, ಹೆನ್ನಾಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಆರ್.ಕೆ.ಕೇಶವರೆಡ್ಡಿ ಮತ್ತು ಶ್ರೀಮತಿ ಮುನಿರತ್ನಮ್ಮ ಮುನಿರಾಜು. ಉಪಾಧ್ಯಕ್ಷೆ ಲಷ್ಮೀ ನಾಗೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಕಿರಣ್ ಕುಮಾರ್. ಮುಖಂಡರಾದ ಮರಿಸ್ವಾಮಿ. ನಾರಾಯಸ್ವಾಮಿ. ಕೃಷ್ಣಣ್ಣ. ಸಂಪಂಗಿರಾಮಯ್ಯ. ಅರುಣ ಮಂಜುನಾಥ್. ರೇಣುಕಾ ಜಗನ್ನಾಥ್. ಆಕೆಸ್ಟಾ ಶಿವು. ಬಾಬು ರಾವ್, ವೆಂಕಟೇಶ್. ಕಾರ್ಯಕ್ರಮದ ಆಯೋಜಕರಾದ ಆನಂದ್. ಗೌತಮ್. ಕೃಷ್ಣಮೂರ್ತಿ. ಭರತ್. ಜ್ಯೋತೇಶ್. ಸತೀಶ್. ಸುನೀಲ್ ಕುಮಾರ್. ಕಾರ್ತಿಕ್. ದನುಷ್. ಸಂಜಯ್ ಬಾಗವಹಿಸಿದ್ದರು.