ಜಿಗಣಿ ಶಂಕರ್ ಪುಣ್ಯಸ್ಮರಣೆ
ಆನೇಕಲ್. ಆ. ೨೬- ಜಿಗಣಿ ಲಿಂಕ್ ರಸ್ತೆಯಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನೆ ವತಿಯಿಂದ ಹೋರಾಟಗಾರರು ಮತ್ತು ಕರ್ನಾಟಕ ರಿಪಬ್ಲಿಕನ್ ಸೇನೆಯ ರಾಜ್ಯಾಧ್ಯಕ್ಷರಾಗಿದ್ದ ದಿ|| ಜಿಗಣಿ ಶಂಕರ್ ರವರಿಗೆ ಮೊದಲನೆ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈವೇಳೆ ಹೋರಾಟಗಾರರಾದ ಮೋಹನ್ ರಾಜ್. ಪಟಾಪಟ್ ನಾಗರಾಜ್ ಮತ್ತು ಚಳುವಳಿ ರಾಜಣ್ಣ ರವರು ಮಾತನಾಡಿ ಜಿಗಣಿ ಶಂಕರ್ ರವರು ನಮ್ಮನ್ನು ಅಗಲಿ ಹೋಗಿರ ಬಹುದು ಆದರೆ ಅವರು ರಾಜ್ಯದ ಉದ್ದಗಲಕ್ಕೂ ಶೋಷಿತರ ಮತ್ತು ಬಡವರ ಪರವಾಗಿ ಮಾಡಿರುವ ಹೋರಾಟಗಳು ಇಂದಿಗೂ ಸಮಾಜದಲ್ಲಿ ಜೀವಂತವಾಗಿದೆ ಎಂದರು. ಜಿಗಣಿ ಶಂಕರ್ ರವರು ಹುಟ್ಟು ಹೋರಾಟಗಾರರಾಗಿದ್ದು ರಾಜ್ಯದಲ್ಲಿ ಅನೇಕ ಸಂಘಟನೆಗಳನ್ನು ಹುಟ್ಟು ಹಾಕಿ ಸಾವಿರಾರು ಜನರಿಗೆ ದಾರಿ ದೀಪವಾಗಿದ್ದಾರೆ ಜೊತೆಗೆ ಜಿಗಣಿ ಶಂಕರ್ ರವರು ಬುದ್ದ ಮತ್ತು ಅಂಬೇಡ್ಕರ್ ರವರ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ರಾಜ್ಯ ಮತ್ತು ಅಂತರ್ ರಾಜ್ಯದಲ್ಲಿ ಪ್ರವಾಸ ಮಾಡಿ ಸಾಹಿತ್ಯದ ಮೂಲಕ ಹಾಗೂ ಹೋರಾಟದ ಮೂಲಕ ಜನರಿಗೆ ಅಂಬೇಡ್ಕರ್ ರವರ ವಿಚಾರದಾರೆಗಳನ್ನು ತಿಳಿಸುವಂತಹ ಕೆಲಸವನ್ನು ಮಾಡಿದ್ದಾರೆ ಎಂದರು.
ಈಗಾಗಲೇ ಜಿಗಣಿ ಶಂಕರ್ ಪುತ್ರ ಪ್ರಜ್ವಲ್ ಜಿಗಣಿ ಶಂಕರ್ ರವರು ತಂದೆಯ ರೀತಿಯಲ್ಲಿಯೇ ಕರ್ನಾಟಕ ರಿಪಬ್ಲಿಕನ್ ಸೇನೆಯ ರಾಜ್ಯಾಧ್ಯಕ್ಷರಾಗಿ ಬಡವರ, ದಲಿತರ ಮತ್ತು ಶೋಷಿತರವಾಗಿ ಪರವಾಗಿ ಕೆಲಸ ಮಾಡುತ್ತಿದ್ದು ಪ್ರಜ್ವಲ್ ಜಿಗಣಿ ಶಂಕರ್ ಜೊತೆಗೆ ಜೊತೆಗೆ ನಾವೆಲ್ಲರೂ ಇದ್ದೇವೆ ಎಂದು ಭರವಸೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ದಲಿತ್ ರಮೇಶ್, ಸಂತೋಶ್ ಕಾಮ್ಲೆ. ಪ್ಯಾನ್ಸಿ ರಮೇಶ್, ರುದ್ರೇಶ್, ಪಿ.ನಾಗರಾಜ್. ಪ್ರಭಾಶೆಟ್ಟಿ, ಅಂಜುಮ್, ಡಿಚ್ಚಿ ರಾಜಣ್ಣ, ಶಾಂತಮ್ಮ, ಶೇಖ ಅಬ್ದುಲ್, ಬಾಗಲಕೋಟೆ ಉಮೇಶ್ ರಾಥೋಡ್. ಮಿಥುನ್, ರಾವಣ. ಆನಂದ್ ಚಕ್ರವರ್ತಿ ಹೊಂಪಲ ಘಟ್ಟ ರವಿ ಮತ್ತು ಕರ್ನಾಟಕ ರಿಪಬ್ಲಿಕನ್ ಸೇನೆಯ ಪದಾದಿಕಾರಿಗಳು ಮತ್ತು ಸ್ಥಳೀಯ ಮುಖಂಡರುಗಳು ಬಾಗವಹಿಸಿದ್ದರು.