ವೇಣುಗೋಪಾಲ ಸ್ವಾಮಿ ಪಲ್ಲಕ್ಕಿ ಮೆರವಣಿಗೆ
ಮಾಲೂರು.ಆ.೨೬- ಪಟ್ಟಣದ ರೈಲ್ವೆ ಪೀದರ ರಸ್ತೆಯ ಬಳಿ ಇರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವಾಲಯದ ಪ್ರಧಾನ ಹಸ್ತಕ ವಾಸುದೇವಾಚಾರ್ಯ ಬೆಳಗಿನ ಜಾವ ಸ್ವಾಮಿಗೆ ವಿಶೇಷ ಅಭಿಷೇಕ ನಂತರ ವಿಶೇಷ ಆಭರಣ ಸಮೇತ ಹೂವಿನ ಅಲಂಕಾರ ಮಾಡಲಾಗಿತ್ತು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ವೇಣುಗೋಪಾಲಸ್ವಾಮಿ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು
ತಾಲೂಕು ಆಡಳಿತ ಏರ್ಪಡಿಸಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೇಣುಗೋಪಾಲ ಸ್ವಾಮಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಗೆ ಸಿದ್ದಪಡಿಸಿದ್ದ ಮುತ್ತಿನ ಪಲ್ಲಕ್ಕಿ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿಗೆ ತೆರಳಿತು.
ಈ ಸಂದರ್ಭದಲ್ಲಿ ವೇಣುಗೋಪಾಲ ಸ್ವಾಮಿ ಟ್ರಸ್ಟಿನ ಅಧ್ಯಕ್ಷ ಎಂವಿ ವೆಂಕಟಸ್ವಾಮಿ ಯಾದವ ಗೊಲ್ಲ ಸಂಘದ ಅಧ್ಯಕ್ಷ ಆಲಗೊಂಡ ಹಳ್ಳಿ ಗೋವಿಂದಪ್ಪ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ಸಮಾಜ ಸೇವಕ ಕೆಂಪಣ್ಣ ಯಾದವ ಸಮಾಜದ ಮುಖಂಡರಾದ ರಾಮಕೃಷ್ಣಪ್ಪ ಚಂದ್ರಶೇಖರ್ ಬಾಬು ನಿವೃತ್ತ ಶಿಕ್ಷಕ ವೆಂಕಟೇಶ್ ನರಸಿಂಹ ಕೃಷ್ಣಪ್ಪ ಚೆನ್ನಕೃಷ್ಣ ಸಂಜೀವಪ್ಪ ಶ್ರೀನಿವಾಸ್ ಇನ್ನಿತರರು ಹಾಜರಿದ್ದರು.