ಭಾರತದ ಆಧ್ಯಾತ್ಮಿಕ ಜ್ಞಾನವನ್ನು ವಿಶ್ವದಾದ್ಯಂತ ತಲುಪಿಸಿದ ಖ್ಯಾತಿದಾದಿ ಪ್ರಕಾಶಮಣೀಜಿಯವರಿಗೆ ಸಲ್ಲುತ್ತದೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.25- ಭಾರತ ಆಧ್ಯಾತ್ಮಿಕ ರಾಷ್ಟ್ರ ಈ ಆಧ್ಯಾತ್ಮಿಕ ಜ್ಞಾನವನ್ನು ವಿಶ್ವದ ನೂರೆಂಭತ್ತು ರಾಷ್ಟ್ರಗಳವರೆಗೆ ತಲುಪಿಸಿದಂತಹ ಖ್ಯಾತಿ ಡಾ||ರಾಜಯೋಗಿನಿ ದಾದಿ ಪ್ರಕಾಶ ಮಣೀಜಿಯವರಿಗೆ ಸಲ್ಲುತ್ತದೆ ಎಂದು ಸಂಸ್ಥೆಯ ಸಂಚಾಲಕಿ, ಸ್ವಾಮಿ ವಿವೇಕಾನಂದ ಸದ್ಭಾವನಾರಾಜ್ಯ ಪ್ರಶಸ್ತಿ ಪುರಸ್ಕøತೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಪ್ರಾಯ ಪಟ್ಟರು
ಅವರು ಪ್ರಕಾಶ ಭವನದಲ್ಲಿ ಏರ್ಪಡಿಸಿದ್ದ ಡಾಕ್ಟರ್ ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಕಾಶ್ ಮಣೀಜಿಯವರ 17ನೇ ಸ್ಮೃತಿ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು ದಾದೀಜಿಯವರ ನಿಸ್ವಾರ್ಥ ಪ್ರೀತಿ ಸ್ನೇಹ ಹಾಗೂ ಭಾಗುವಿಕೆಯ ಶಕ್ತಿ 60 ಸಾವಿರಕ್ಕೂ ಹೆಚ್ಚು ಸಹೋದರಿಯರನ್ನು ವಿಶ್ವ ಕಲ್ಯಾಣದ ಕಾರ್ಯದಲ್ಲಿ ತೊಡಗಿಸಲು ಪ್ರೇರಣೆ ನೀಡಿದರುಅವರ ಮಾತೃಪೂರ್ಣ ಶಕ್ತಿ ಈ ಸಂಸ್ಥೆಯನ್ನು ಮಹಿಳೆಯರೇ ನಡೆಸುವಂತೆ ಆಧ್ಯಾತ್ಮಿಕ ಸಬಲೀಕರಣಗೊಳಿಸಿದರು. ಇವರು ವಿಶ್ವ ಮಾತೃ ಹೃದಯಿಆಗಿರುವಕಾರಣ ಇಂದಿನ ದಿನವನ್ನು ವಿಶ್ವ ಬಂದುತ್ವ ದಿನವನ್ನಾಗಿಆಚರಿಸಲಾಗುತ್ತಿದೆಎಂದರು.
ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ಬಿಕೆ ಆರಾಧ್ಯ, ಪುಟ್ಟಶೇಖರ ಮೂರ್ತಿ, ನಾಗರಾಜು, ಶ್ರೀನಿವಾಸ್, ಸುಂದರ್, ಮರಗತಮ್ಮ, ಆಶಾ,ಗೀತಾ, ಸುನಿತಾ, ಲಕ್ಷ್ಮಿ ನರಸಿಂಹ, ಪ್ರಸಾದ್ ಹಾಜರಿದ್ದರು