ನಾಲೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಎಡ ಮತ್ತು ಬಲ ಕೈ ಮೇಲೆ ಹಚ್ಚೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಆ.26:– ಪಟ್ಟಣದ ಹೊರವಲಯ ಅರಕೆರೆ ಬಳಿಯ ಚಾಮರಾಜ ಬಲದಂಡೆಯ ನಾಲೆಯಲ್ಲಿ 35 ರಿಂದ 40 ವರ್ಷದ ಗಂಡಸಿನ ಮೃತ ದೇಹ ಪತ್ತೆಯಾಗಿದೆ. ಈ ಸಂಬಂದ ಕೆ.ಆರ್.ನಗರ ಪೆÇಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಎಂದು ಪ್ರಕರಣ ದಾಖಲಾಗಿದೆ.
ಈ ವ್ಯಕ್ತಿಯ ಮುಖದ ಭಾಗ ಗುರ್ತಿಸಲು ಸಾಧ್ಯವಾಗದೇ ಇದ್ದು. ನಾಲಿಗೆಯು ತೆರೆದಿದ್ದು. ನೀರಿನ ಜಲಚರ ಪ್ರಾಣಿಗಳು ಅಲ್ಲಲ್ಲಿ ತಿಂದಿರುವ ಲಕ್ಷಣಗಳಿದ್ದು, ಮೃತನ ಮೈ ಮೇಲೆ ನೇರಳೆ ಮತ್ತು ಕಪ್ಪು ಮಿಶ್ರೀತ ಚೌಕವುಳ್ಳ ತುಂಬುತೋಳಿನ ಶರ್ಟ್, ಕಪ್ಪು ಬಣ್ಣದ ಬಟ್ಟೆ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಅಂಡರ್ ವೇರ್ ಧರಿಸಿದ್ದು, ಬಲದ ಕೈನಲ್ಲಿ ಅಃ ಚಂದ್ರಿಕ ಎಂದು ಹಾಗೂ ಎಡದ ಕೈನಲ್ಲಿ ಪದ್ಮ ಙಎಒ ಎಂಬ ಹಸಿರು ಹಚ್ಚೆ ಗುರುತು ಇರುತ್ತೆ. ಮೃತನ ಮೈ ಮೇಲೆ ಯಾವುದೇ ಗಾಯಗಳನ್ನು ಗುರ್ತಿಸಲು ಆಗದ ರೀತಿ ಕೊಳೆತ ಸ್ಥಿತಿಯಲ್ಲಿ ಶವವು ಇರುತ್ತದೆ. ಅಪರಿಚಿತ ಶವದ ವಾರಸುದಾರರ ಬಗ್ಗೆ ವಿಚಾರ ಮಾಡಿ ನೋಡಲಾಗಿ ಯಾರು ಕೂಡ ಬಂದಿರುವುದಿಲ್ಲ.
ಹಚ್ಚೆಸಿ ಕೊಂಡಿರುವ ಈ ವ್ಯಕ್ತಿಯನ್ನು ಎಲ್ಲೋ ಕೋಲೆ ಮಾಡಿ ಅಥವಾ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾರ, ಈ ವ್ಯಕ್ತಿಯೇ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂಬ ಪ್ರಶ್ನೆಗಳನ್ನು ಪೆÇಲೀಸರನ್ನು ಕಾಡುತ್ತಿವೆ. ಕಳೆದ ವರ್ಷ ಸಾಗರಕಟ್ಟೆ ಕಾವೇರಿ ಹಿನ್ನೀರಿನಲ್ಲಿ ಇದೇ ರೀತಿಯ ಅಚ್ಚೆ ಹಾಕಿಸಿ ಕೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ಕೊಲೆ ಮಾಡಲಾಗಿತ್ತು. ಆದರೆ ಕೋಲೆಯಾದ ವ್ಯಕ್ತಿಗಳ ಸುಳಿವು ಇದುವರೆವಿಗೂ ಪತ್ತೆಯಾಗಿಲ್ಲ, ಈಗಾಲಾದರು ಪತ್ತೆ ಹಚ್ಚುವ ಕೆಲಸ ಮಾಡುತ್ತಾರೆ ಎಂಬ ಪಟ್ಟಣದ ನಾಗರೀಕರ ಪ್ರಶ್ನೆಯಾಗಿದೆ.
ಅಪಚಿತ ಗಂಡಸಿನ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಕೆ.ಆರ್.ನಗರ ಪೆÇಲೀಸ್ ಠಾಣೆ 08223- 263666, 9480805036 ಮೈಸೂರು ಜಿಲ್ಲಾ ಪೆÇಲೀಸ್ ಕಂಟ್ರೋಲ್ ರೂಂ-0821-2418612 ಮಾಹಿತಿ ನೀಡಲು ಕೋರಿದೆ.