ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಕೊಡುಗೆಅಪಾರ ಹಾಗೂ ಮರೆಯಲಾಗದ ಸೇವೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.25- ಮೈಸೂರು ಪ್ರಾಂತ್ಯದಕೋಟ್ಯಾಂತರಜನರಿಗೆ ಶಿಕ್ಷಣ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ನೀಡಿದ ಸುತ್ತೂರು ಸಂಸ್ಥಾನದ ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಕೊಡುಗೆಅಪಾರ ಹಾಗೂ ಮರೆಯಲಾಗದ ಸೇವೆ ಎಂದುರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಸುರೇಶ್‍ಎನ್‍ಋಗ್ವೇದಿ ತಿಳಿಸಿದರು.
ಅವರುಋಗ್ವೇದಿ ಯೂತ್‍ಕ್ಲಬ್ ನಗರದಜೈ ಹಿಂದ್‍ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾಕರ್ನಾಟಕದಲ್ಲಿಜೆಎಸ್‍ಎಸ್ ಸಂಸ್ಥೆಯನ್ನು ಸ್ಥಾಪನೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿ, ಉದ್ಯೋಗ, ನಿರ್ವಹಣೆ ಹಾಗೂ ಸುಭದ್ರವಾದಜೀವನ ನಡೆಸಲುಜೆಎಸ್‍ಎಸ್ ಶಿಕ್ಷಣ ಸಂಸ್ಥೆ ಕಾರಣವಾಗಿದೆ. ಸುತ್ತೂರು ಸಂಸ್ಥಾನ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದ್ದು, ದಾಸೋಹದಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ರಾಜ್ಯ ರಾಷ್ಟ್ರಗಳಲ್ಲಿ ನಿರ್ಮಿಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಸುಭದ್ರವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹಾಗೂ ಉದ್ಯೋಗ ಸೃಷ್ಟಿಸಿ ಸಮಾಜದಲ್ಲಿಗೌರವವಾಗಿ ಬಾಳಲು ಮಹತ್ವವಾದ ಶಿಕ್ಷಣ,ಮಾರ್ಗದರ್ಶನ ಹಾಗೂ ಶಕ್ತಿಯನ್ನು ನೀಡಿದ ಮಹಾಸಂಸ್ಥೆ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ತಮ್ಮ ಸೇವೆ ಮತ್ತುತ್ಯಾಗದ ಮೂಲಕ ಸದೃಢವಾದ ಸಂಸ್ಥೆಯನ್ನು ಬೆಳೆಸಿ ಇಂದಿಗೂ ಕೂಡಜನರ ಹೃದಯದಲ್ಲಿ ಭಗವಂತನರೂಪದ ಸ್ಥಾನವನ್ನು ಪಡೆದಿದ್ದಾರೆ. ಸುತ್ತೂರು ಸಂಸ್ಥೆ ಜನರಿಗೆ ಪ್ರೀತಿ ವಿಶ್ವಾಸ ಮನಃಶಾಂತಿಯನ್ನು ನೀಡಿರುವ ಸಂಸ್ಥೆಯಾಗಿದೆಎಂದರು. ಸಂಘ ಸಂಸ್ಥೆಗಳು ಸಮಾಜಅವರ ಸೇವೆಯನ್ನು ಸದಾ ಕಾಲ ಸ್ಮರಿಸುವ ಮೂಲಕ ಅವರಿಗೆಗೌರವವನ್ನು ಸಲ್ಲಿಸುವುದುಕರ್ತವ್ಯವಾಗಿದೆಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಚಂದ್ರಶೇಖರ್ ಮಾತನಾಡಿಜೆಎಸ್‍ಎಸ್ ಸಂಸ್ಥೆ ಶಿಕ್ಷಣದ ಜೊತೆಗೆಉತ್ತಮ ಶಿಸ್ತು, ಪ್ರಾಮಾಣಿಕತೆ,ಸಾಂಸ್ಕೃತಿಕ ಹಾಗೂ ಕ್ರೀಡಾಚಟುವಟಿಕೆ ಹಾಗೂ ಸಂಸ್ಕಾರಗಳನ್ನು ಬೆಳೆಸಿದ ಮಹಾನ್ ಸಂಸ್ಥೆ ಎಂದರು.
ಕಾರ್ಯಕ್ರಮದಲ್ಲಿಕುಮಾರ್, ಮಹದೇವೇಗೌಡ, ಮಹಾದೇವಶೆಟ್ಟಿ, ಶ್ರಾವ್ಯ, ರವಿ, ಶೇಖರ್, ಮಂಜುನಾಥ್ ಇದ್ದರು.