ಥ್ರೋಬಾಲ್ ಸೆಂಟ್ ಮೇರಿಸ್ ಪ್ರೌಡ ಶಾಲೆ: ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸಂಜೆವಾಣಿ ವಾರ್ತೆ
ಹನೂರು ಆ 26 :- ತಾಲೂಕಿನ ಮಾರ್ಟಳ್ಳಿ ಸೆಂಟ್ ಮೇರಿಸ್ ಫ್ರೌಢಶಾಲೆ ಬಾಲಕಿಯರು ತಾಲ್ಲೂಕು ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಇದು 4ನೇ ಬಾರಿ ಈ ಪ್ರಶಸ್ತಿಯನ್ನು ಪಡೆದಿರುವುದು ಗಮನಾರ್ಹವಾಗಿದೆ.
ಶಾಲೆಗೆ ಕೀರ್ತಿ ತಂದು ಕೊಟ್ಟ ವಿದ್ಯಾರ್ಥಿಗಳನ್ನು ಶಾಲೆಯ ವ್ಯವಸ್ಥಾಪಕರಾದ ಫಾ.ಟೆನ್ನಿ ಕುರಿಯನ್ ಮುಖ್ಯಶಿಕ್ಷಕರಾದ ಸುನೀಲ್ ದೈಹಿಕ ಶಿಕ್ಷಕರಾದ ಅಗಸ್ಟಿನ್ ಅಭಿನಂದಿಸಿದರು.