ಪದವಿ ಪೂರ್ವ ಕಾಲೇಜು ಕ್ರೀಡಾ ಕೂಟದಲ್ಲಿ: ಕ್ರಿಸ್ತರಾಜ ವಿದ್ಯಾರ್ಥಿಗಳ ಸಾಧನೆ
ಸಂಜೆವಾಣಿ ವಾರ್ತೆ
ಹನೂರು ಆ 26 :- ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ 2024-25ನೇ ಸಾಲಿನ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರಿಸ್ತರಾಜ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಕ್ರೀಡಾಕೂಟದಲ್ಲಿ ಬಹುತೇಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಅಥ್ಲೆಟಿಕ್ಸ್ :
100 ಮೀ ಓಟ ನಾಜೀಮಾ ಬಾನು ದ್ವಿತೀಯ, 200 ಮೀ ಓಟ ದಿನೇಶ್ ತೃತೀಯ, 200 ಮೀ ಓಟ ನಾಜೀಮ ಬಾನು ತೃತೀಯ.
400 ಮೀ ಓಟ ಕಾವ್ಯ ಪ್ರಥಮ,
400 ಮೀಟರ್ ಓಟ ಪವಿತ್ರ ಎಂ.ಜಿ.ಎಸ್ ದ್ವಿತೀಯ,
ಬಾಲಕರ 400 ಮೀಟರ್ ಓಟ ಅನಿಲ್ ದ್ವಿತೀಯ, 800 ಮೀಟರ್ ಓಟ ಕಾವ್ಯ ದ್ವಿತೀಯ, 800 ಓಟ ಪವಿತ್ರ ಎಂ.ಜಿ.ಎಸ್ ತೃತೀಯ,
1500 ಮೀಟರ್ ಓಟ ಮಹೇಂದ್ರ ಪ್ರಥಮ, ಕೀರ್ತನಾ ತೃತೀಯ,
3000 ಮೀಟರ್ ಓಟ ಮಹೇಂದ್ರ ಪ್ರಥಮ, 3000 ಮೀಟರ್ ಓಟ ಕೀರ್ತನಾ ತೃತೀಯ, ಗುಡ್ಡಗಾಡು ಓಟ ಮಹೇಂದ್ರ ಪ್ರಥಮ, ಕೌಶಿತ್ ನಾಲ್ಕನೆಯ ಸ್ಥಾನ, ಬಾಲಕಿಯರ ಗುಡ್ಡಗಾಡು ಓಟ ಕೀರ್ತನಾ ಆರನೆಯ ಸ್ಥಾನ, ರಿಯಾ ಜೋಸ್ಲಿನ್ ಏಳನೆಯ ಸ್ಥಾನ, ನಡಿಗೆ ಸ್ಪರ್ಧೆ ಮಲ್ಲಿಕಾರ್ಜುನಾ ತೃತೀಯ ಸ್ಥಾನ., ಬಾಲಕರ ್ಠ4400 ಮೀ ರಿಲೇ ಲವನ್ ತಂಡ ಪ್ರಥಮ ಸ್ಥಾನ.
್ಠ4100 ಮೀಟರ್ ರಿಲೇ ಮಹದೇವ ತಂಡ ದ್ವಿತೀಯ. ಬಾಲಕಿಯರ
್ಠ4100 ಮೀ ರಿಲೇ ಕಾವ್ಯ ತಂಡ ತಂಡ ಪ್ರಥಮ, ್ಠ4400 ಮೀ ರಿಲೇ ಕೀರ್ತನಾ ತಂಡ ಪ್ರಥಮ.
ಮಹೇಂದ್ರ ಪಿ ಎಂಬ ವಿದ್ಯಾರ್ಥಿ 1500 ಮೀಟರ್, 3000 ಮೀಟರ್, ಗುಡ್ಡಗಾಡು ಓಟ, ್ಠ4400 ಮೀಟರ್ ರಿಲೇ ಈ ಸ್ಪರ್ಧೆಗಳಲ್ಲಿ ಭಾಗವಹಿಸಿ
ಪ್ರಥಮ ಸ್ಥಾನವನ್ನು ಪಡೆದು ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾನೆ.
ಪಂದ್ಯಾಟಗಳಲ್ಲಿ ( ಟೀಮ್ ಗೇಮ್ )ಬಾಲಕರ ಖೋಖೋ ಮಹದೇವ್ ತಂಡ ಪ್ರಥಮ,
ಬಾಲಕಿಯರ ಖೋ ಖೋ ಪವಿತ್ರ ಎಂ.ಜಿ.ಎಸ್ ತಂಡ ಪ್ರಥಮ, ಬಾಲಕರ ಬಾಲ್ ಬ್ಯಾಡ್ಮಿಂಟನ್ ಅನಂತ್ ತಂಡ ಪ್ರಥಮ, ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಆಶಾ ತಂಡ ಪ್ರಥಮ,
ಬಾಲಕಿಯರ ಥ್ರೋ ಬಾಲ್ ನಾಝೀಮಾ ತಂಡ ದ್ವಿತೀಯ, ಬಾಲಕರ ಷಟಲ್ ಯೋಗೇಶ್ವರ ಮತ್ತು ತಂಡ ದ್ವಿತೀಯ,
ಬಾಲಕರ ಥ್ರೋ ಬಾಲ್ ಸಿದ್ದೇಶ್ ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ವ್ಯವಸ್ಥಾಪಕ ಫಾದರ್ ರೋಷನ್, ಪ್ರಾಂಶುಪಾಲರಾದ ಸಿಸ್ಟರ್ ಜಾನ್ ಶಾಂತಿ, ತರಬೇತುದಾರ ವಿನೋದ್, ಉಪನ್ಯಾಸಕರಾದ ಪ್ರಕಾಶ್ , ಸೋಮಣ್ಣ, ಪವಿತ್ರ, ಜೈನ್ ಮುತ್ತು ಮತ್ತು ಇತರರು ಅಭಿನಂದನೆ ಸಲ್ಲಿಸಿ ಜಿಲ್ಲಾ ಹಂತಕ್ಕೆ ಶುಭ ಹಾರೈಸಿದ್ದಾರೆ.